Publish Date: Thu, 16 Dec 2021 (08:47 IST)
Updated Date: Thu, 16 Dec 2021 (08:54 IST)
ಹೊಸದಿಲ್ಲಿ : ಪಶ್ಚಿಮ ಬಂಗಾಳದ ಏಳು ವರ್ಷದ ಬಾಲಕನಲ್ಲಿ ಓಮಿಕ್ರಾನ್ ತಳಿ ಕೊರೊನಾ ವೈರಸ್ ಪತ್ತೆಯಾಗಿದೆ.
ಇದು ರಾಜ್ಯದ ಮೊದಲ ಹೊಸ ಪ್ರಭೇದದ ವೈರಸ್ ಪ್ರಕರಣವಾಗಿದೆ ಎಂದು ಪಶ್ಚಿಮ ಬಂಗಾಳ ಆರೋಗ್ಯ ಇಲಾಖೆ ಬುಧವಾರ ತಿಳಿಸಿದೆ. ಈ ಬಾಲಕ ತನ್ನ ಪೋಷಕರ ಜತೆ ಅಬುದಾಬಿಯಿಂದ ಹೈದರಾಬಾದ್ಗೆ ಬಂದಿದ್ದ.
ಅಲ್ಲಿಂದ ಮುರ್ಷಿದಾಬಾದ್ ಜಿಲ್ಲೆಗೆ ತೆರಳಿದ್ದ. ಈತನ ತಂದೆ ತಾಯಿ ಇಬ್ಬರಲ್ಲಿಯೂ ಕೋವಿಡ್ 19 ನೆಗೆಟಿವ್ ಬಂದಿದೆ ಎಂದು ವರದಿಗಳು ತಿಳಿಸಿವೆ. ಬಾಲಕನನ್ನು ಮುರ್ಷಿದಾಬಾದ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Ramya kosira
Publish Date: Thu, 16 Dec 2021 (08:47 IST)
Updated Date: Thu, 16 Dec 2021 (08:54 IST)