Publish Date: Tue, 20 Oct 2020 (11:28 IST)
Updated Date: Tue, 20 Oct 2020 (11:30 IST)
ಪಾಟ್ನಾ : ಪಾಠ ಅಭ್ಯಾಸ ಮಾಡಲು ಗೆಳತಿಯ ಮನೆಗೆ ಬಂದ ಹುಡುಗಿಯ ಮೇಲೆ ಗೆಳತಿಯ ತಂದೆ ಮಾನಭಂಗ ಎಸಗಿದ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ಪಾತೇಪುರದ ಮೌದ್ಹಾದಲ್ಲಿ ನಡೆದಿದೆ.
ಸಂತ್ರಸ್ತೆ 10ನೇ ತರಗತಿಯಲ್ಲಿ ಓದುತ್ತಿದ್ದು ಅಭ್ಯಾಸ ಮಾಡಲು ತನ್ನ ನೆರೆಮನೆಯಲ್ಲಿರುವ ಗೆಳೆತಿಯ ಮನೆಗೆ ಬಂದಿದ್ದಾಳೆ. ಅಲ್ಲಿ ಗೆಳತಿ ಇರಲಿಲ್ಲ. ಆದರೆ ಆ ವೇಳೆ ಮನೆಯಲ್ಲಿದ್ದ ಗೆಳತಿಯ ತಂದೆ ಆಕೆಯ ಮೇಲೆ ಮಾನಭಂಗ ಎಸಗಿ ಈ ವಿಚಾರ ಯಾರಿಗಾದರೂ ತಿಳಿಸಿದರೆ ಸಹೋದರರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.
ಆದರೆ ಇತ್ತೀಚೆಗೆ ಹುಡುಗಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನಲೆಯಲ್ಲಿ ಆಸ್ಪತ್ರೆಗೆ ಹೋದಾಗ ಆಕೆ ಗರ್ಭಿಣಿಯಾಗಿದ್ದು ತಿಳಿದುಬಂದಾಗ ನಡೆದ ಘನಟೆಯನ್ನು ಪೋಷಕರಿಗೆ ತಿಳಿಸಿದ್ದಾಳೆ. ಪೋಷಕರು ಸ್ಥಳೀಯ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.