Publish Date: Sun, 18 Oct 2020 (12:42 IST)
Updated Date: Sun, 18 Oct 2020 (12:44 IST)
ಚೆನ್ನೈ: 42 ವರ್ಷದ ಮಲತಂದೆಯೊಬ್ಬ ಅಪ್ರಾಪ್ತ ಬಾಲಕಿಯ ಶೀಲಕೆಡಿಸಿದ ಘಟನೆ ಚೆನ್ನೈನಲ್ಲಿ ನಡೆದಿದೆ. ಘಟನೆಯಿಂದ ಮನನೊಂದ ಬಾಲಕಿ ನೇಣು ಬಿಗಿದು ಜೀವಕೊನೆಗಾಣಿಸಿದ್ದಾಳೆ.
ಪತ್ನಿ ಮನೆಯಲ್ಲಿಲ್ಲದ ವೇಳೆ ಪತಿ ತನ್ನ ಮಲ ಮಗಳು ಸಹೋದರನ ಜತೆ ಮನೆಯ ಹೊರಗೆ ಆಟವಾಡಿಕೊಂಡಿರುವಾಗ ಇಂಥಾ ಹೀನ ಕೃತ್ಯವೆಸಗಿದ್ದಾಳೆ. ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ತಾಯಿ ಮನೆಗೆ ಬಂದ ಬಳಿಕ ಮಲತಂದೆಯ ಹೀನ ಕೃತ್ಯವನ್ನು ಬಾಲಕಿ ವಿವರಿಸಿದ್ದಾಳೆ. ಈ ಸಂಬಂಧ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.