Publish Date: Sat, 17 Oct 2020 (18:19 IST)
Updated Date: Sat, 17 Oct 2020 (18:21 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ಗೆಳತಿಯರ ನಡುವೆ ಮೆಗಾ ಫೈಟ್ ಶುರುವಾಗಿದೆ.
ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಗೆಳತಿ ಅಂಕಿತಾ ಲೋಖಂಡೆ ವಿರುದ್ಧ ರಿಯಾ ಚಕ್ರವರ್ತಿ ಹೊಸ ಕೇಸ್ ಹಾಕುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಅಂಕಿತಾ ವಿರುದ್ಧ ರಿಯಾ ಕಾನೂನು ಕ್ರಮ ತೆಗೆದುಕೊಳ್ಳಬಹುದೆಂದು ಊಹಾಪೋಹಗಳು ಹರಡಿವೆ.
ಅಂಕಿತಾ ಈ ಹಿಂದೆ ರಿಯಾಳನ್ನು ಟೀಕಿಸಿದ್ದರು. ಸುಶಾಂತ್ ಸಿಂಗ್ ರಜಪೂತ್ ಡ್ರಗ್ ಸೇವನೆಗೆ ರಿಯಾ ಒತ್ತಾಯ ಮಾಡಿದ್ದಳು ಎನ್ನುವ ಅರ್ಥ ಬರುವಂತೆ ಅಂಕಿತಾ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.