Publish Date: Tue, 20 Oct 2020 (09:43 IST)
Updated Date: Tue, 20 Oct 2020 (09:47 IST)
ಗಾಜಿಯಾಬಾದ್ : 33 ವರ್ಷದ ವಿವಾಹಿತ ವೈದ್ಯನೊಬ್ಬ ಅಸ್ತಮಾದಿಂದ ಬಳಲುತ್ತಿದ್ದ ವಿವಾಹಿತ ಮಹಿಳೆ ರೋಗಿಯೊಂದಿಗೆ ಡೇಟಿಂಗ್ ಮಾಡಿ ಬಳಿಕ ಆಕೆಗೆ ಧೂಮಪಾನ ಮಾಡಿಸಿ ಕೊಲೆ ಮಾಡಿದ ಘಟನೆ ಗಾಜಿಯಾಬಾದ್ ನಲ್ಲಿ ನಡೆದಿದೆ.
ವೈದ್ಯನ ಕ್ಲಿನಿಕ್ ಗೆ ಬಂದ ಮಹಿಳೆಗೆ ವೈದ್ಯನ ಜೊತೆ ಸ್ನೇಹ ಬೆಳೆದಿದೆ. ಬಳಿಕ ಅವರಿಬ್ಬರ ನಡುವೆ ಪ್ರೇಮ ಸಂಬಂಧ ಚಿಗುರಿದೆ. ಕೊನೆಗೆ ಮಹಿಳೆ ತನ್ನೊಂದಿಗೆ ವಾಸಿಸುವಂತೆ ವೈದ್ಯನಿಗೆ ಒತ್ತಾಯಿಸಿದ್ದಾಳೆ. ಇದರಿಂದ ಬೇಸತ್ತ ವೈದ್ಯ ಆಕೆ ಅಸ್ತಮಾ ರೋಗಿ ಎಂಬುದನ್ನು ತಿಳಿದಿದ್ದರೂ ಆಕೆಯ ಧೂಪಾನ ಮಾಡಿಸಿ ಉಸಿರುಗಟ್ಟಿಸಿ ಕೊಂದು ಶವವನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದಾನೆ.
ಇತ್ತ ಮಹಿಳೆ ನಾಪತ್ತೆಯಾದ ಬಗ್ಗೆ ಆಕೆಯ ಮನೆಯವರು ದೂರು ದಾಖಲಿಸಿದ್ದಾರೆ. ಬಳಿಕ ಪೊಲೀಸರಿಗೆ ಮಹಿಳೆಯ ಶವ ಪತ್ತೆಯಾಗಿದ್ದು, ತನಿಖೆ ನಡೆಸಿದಾಗ ಆರೋಪಿ ವೈದ್ಯ ಸಿಕ್ಕಿಹಾಕಿಕೊಂಡಿದ್ದಾನೆ. ಆತನನ್ನು ಬಂಧಿಸಿದ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.