ಅಹಮದಾಬಾದ್ : ಹೆರಿಗೆಗೆ ಸಂಬಂಧಪಟ್ಟ ವೈದ್ಯಕೀಯ ಬಿಲ್ ಪಾವತಿಸಲು ಹೇಳಿದ್ದಕ್ಕೆ ವ್ಯಕ್ತಿಯೊಬ್ಬ ಮಹಿಳಾ ವೈದ್ಯೆಗೆ ಬೆತ್ತಲೆಗೊಳಿಸುವುದಾಗಿ ಬೆದರಿಕೆ ಹಾಕಿದ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ.
ಮಹಿಳೆಯೊಬ್ಬಳಿಗೆ ಮಲ್ಟಿಸ್ಪೇಷಲಿಟಿ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಆದರೆ ಡಿಸ್ಚಾರ್ಜ್ ಆಗುವ ವೇಳೆ ಆಸ್ಪತ್ರೆ ಬಿಲ್ ಕಟ್ಟುವಂತೆ ಹೇಳಿದ್ದಕ್ಕೆ ಹೆರಿಗೆಯಾದ ಮಹಿಳೆಯ ಪತಿ ತನ್ನ ಸಹಚರರೊಂದಿಗೆ ವೈದ್ಯೆಯ ಕಚೇರಿಗೆ ನುಗ್ಗಿ ಬಿಲ್ ಪಾವತಿಸುವುದಿಲ್ಲ.ಒಂದು ವೇಳೆ ಬಿಲ್ ಪಾವತಿಸಲು ಹೇಳಿದರೆ ಅಪಹರಣ ಮಾಡಿ ನಗ್ನ ವಿಡಿಯೋ ಚಿತ್ರೀಕರಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಈ ಬಗ್ಗೆ ವೈದ್ಯೆ ಪೊಲೀಸರಿಗೆ ರೋಗಿಯ ಪತಿಯ ವಿರುದ್ಧ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡಸುತ್ತಿದ್ದಾರೆ ಎನ್ನಲಾಗಿದೆ.