Publish Date: Mon, 05 Oct 2020 (16:43 IST)
Updated Date: Mon, 05 Oct 2020 (16:44 IST)
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಕುರಿತು ವೈರಲ್ ಆಗಿರುವ ಆಡಿಯೋ ಹೊಸ ವಿವಾದ ಹುಟ್ಟುಹಾಕಿದೆ.
ಸುಶಾಂತ್ ಸಿಂಗ್ ರಜಪೂತ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಸೋರಿಕೆಯಾದ ಆಡಿಯೊ ಕ್ಲಿಪ್‌ನಲ್ಲಿ ಏಮ್ಸ್ ನ ಡಾ.ಸುಧೀರ್ ಗುಪ್ತಾ ಹೇಳಿದ್ದಾರೆ ಎನ್ನುವುದು ಸಾಕಷ್ಟು ವಿವಾದಕ್ಕೆ ಕಾರಣವಾಗುತ್ತಿದೆ.
ಡಾ. ಸುಧೀರ್ ಗುಪ್ತಾ ಅವರು ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹದ ಚಿತ್ರಗಳನ್ನು ನೋಡಿದ ನಂತರ, ನಟನ ಸಾವು ಆತ್ಮಹತ್ಯೆಯಲ್ಲ ಆದರೆ ಕೊಲೆ ಎಂದು ಸೂಚಿಸಿದ್ದಾರೆ.
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ವಿಧಿವಿಜ್ಞಾನ ತಂಡವು ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊಲೆಯಲ್ಲ ಎಂದು ವರದಿ ನೀಡಿದ ಒಂದೆರಡು ದಿನಗಳಲ್ಲೇ ವೈದ್ಯರ ಆಡಿಯೋ ವೈರಲ್ ಆಗಿದೆ.
ಡಾ. ಸುಧೀರ್ ಗುಪ್ತಾ ಅವರ ಪ್ರಮುಖ ಆಡಿಯೊ ಕ್ಲಿಪ್ ತನಿಖೆಯಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿಧಿವಿಜ್ಞಾನದ ವರದಿಯ ಫಲಿತಾಂಶಕ್ಕೆ ವಿರುದ್ಧವಾಗಿ, ಸುಶಾಂತ್‌ನನ್ನು ಕೊಲೆ ಮಾಡಲಾಗಿದೆ ಎಂದು ಆಡಿಯೋ ಕ್ಲಿಪ್‌ನಲ್ಲಿ ಗುಪ್ತಾ ಹೇಳಿದ್ದಾರೆ.