ಮೊಬೈಲ್ ಸಂಖ್ಯೆಗಳೊಂದಿಗೆ ಆಧಾರ್ ಸಂಖ್ಯೆ ಜೋಡಿಸುವ ಟೆಲಿಕಾಂ ಇಲಾಖೆಯ (ಡಿಒಟಿ) ನಿರ್ದೇಶನವನ್ನು ಮುಕ್ತವಾಗಿ ವಿರೋಧಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮೊಬೈಲ್ ಸಂಪರ್ಕವನ್ನು ಬೇಕಾದ್ರೆ ಕಡಿತಗೊಳಿಸಿ ಆಧಾರ ಸಂಖ್ಯೆಯನ್ನು ಜೋಡಿಸುವುದಿಲ್ಲ ಎಂದು ಗುಡುಗಿದ್ದಾರೆ.
ಮೊಬೈಲ್ ಸಂಖ್ಯೆಯೊಂದಿಗೆ ಆಧಾರ ಯಾಕೆ ಜೋಡಿಸುವ ಹಿಂದಿನ ಉದ್ದೇಶವೇನು? ಎಂದು ಪ್ರಶ್ನಿಸಿದ ಅವರು, ಟೆಲಿಕಾಂ ಕಂಪೆನಿಗಳ ನಿರ್ದೇಶನ ಪಾಲಿಸುವುದಿಲ್ಲ. ಬೇಕಾದ್ರೆ ಮೊಬೈಲ್ ಸಂಪರ್ಕ ಕಡಿತಗೊಳಿಸಲಿ ಎಂದು ಸವಾಲ್ ಹಾಕಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತ್ರವಲ್ಲ. ಮೊಬೈಲ್ ಸಂಖ್ಯೆಗೆ ಆಧಾರ ಸಂಖ್ಯೆ ಜೋಡಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಹಲವರು ದೂರು ದಾಖಲಿಸಿದ್ದಾರೆ.
ಸುಪ್ರೀಂಕೋರ್ಟ್, ಮೊಬೈಲ್ ಸಂಖ್ಯೆಗೆ ಆದಾರ ಕಡ್ಡಾಯಗೊಳಿಸುವ ಬಗ್ಗೆ ಆಕ್ಟೋಬರ್ 30 ರಂದು ಮಹತ್ವದ ತೀರ್ಪು ನೀಡಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.