Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮತದಾನಕ್ಕೂ ಇನ್ನುಮುಂದೆ ಆಧಾರ್ ಕಾರ್ಡ್ ಕಡ್ಡಾಯ…?

ಮತದಾನಕ್ಕೂ ಇನ್ನುಮುಂದೆ ಆಧಾರ್ ಕಾರ್ಡ್ ಕಡ್ಡಾಯ…?
ನವದೆಹಲಿ , ಮಂಗಳವಾರ, 17 ಅಕ್ಟೋಬರ್ 2017 (19:55 IST)
ನವದೆಹಲಿ: ಶೀಘ್ರವೇ ಮತದಾನಕ್ಕೂ ಆಧಾರ್‌ ಕಾರ್ಡನ್ನು ಏಕೈಕ ಗುರುತು ಪತ್ರವಾಗಿ ಬಳಸಬಹುದು ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎಸ್‌.ಕೃಷ್ಣಮೂರ್ತಿ ಹೇಳಿದ್ದಾರೆ.

ಮತದಾನಕ್ಕೆ ವೋಟರ್ ಐಡಿ ಇಲ್ಲದೆ ಇದ್ದ ಸಂದರ್ಭದಲ್ಲಿ ಪಾಸ್ ಪೋರ್ಟ್, ಡ್ರೈವಿಂಗ್ ಲೈಸನ್ಸ್ಸ ಸೇರಿದಂತೆ ಪರ್ಯಾಯವಾಗಿ ಬೇರೆ ದಾಖಲೆಗಳನ್ನು ಬಳಸುತ್ತಿದ್ದೇವೆ. ಇದು ಹಲವು ಬಗೆಯ ತೊಂದರೆ, ಗೊಂದಲಗಳಿಗೆ ಕಾರಣವಾಗಿದೆ. ಹೀಗಾಗಿ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಮತದಾನಕ್ಕೆ ಒಂದೇ ಗುರುತು ಪತ್ರ ಬಳಸುವುದು ಒಳಿತು. ಇದಕ್ಕೆ ಪರ್ಯಾಯವಾಗಿ ಆಧಾರ್‌ ಕಾರ್ಡ್‌ ವ್ಯವಸ್ಥೆ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ ಬಹುತೇಕ ಮಂದಿ ಆಧಾರ್‌ ಕಾರ್ಡ್‌ ಹೊಂದಿದ್ದಾರೆ. ಇನ್ನೂ ಕಾರ್ಡ್ ಪಡೆಯದವರು 2019 ಅಥವಾ 2020 ಕಟ್‌ ಆಫ್ ಡೇಟ್‌ ಎಂದು ನಿಗದಿಸಬಹುದು. ಆ ಬಳಿಕ ಆಧಾರ್‌ ಕಾರ್ಡನ್ನು ಮತದಾನಕ್ಕೆ ಏಕೈಕ ಗುರುತು ಪತ್ರವೆಂದು ಸರ್ಕಾರ ಘೋಷಿಸಬಹುದು ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ದಿಗ್ವಿಜಯ್ ಸಿಂಗ್ ಅಳಿಯ 1.15 ಕೋಟಿ ಲಂಚ ಪಡೆದಿದ್ದಾರೆ: ಬಾಬುರಾವ್ ಚೌಹಾಣ್