Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವದಂತಿಗೆ ಬ್ರೇಕ್: ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯ ಎಂದ ಆರ್ ಬಿಐ

ವದಂತಿಗೆ ಬ್ರೇಕ್: ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯ ಎಂದ ಆರ್ ಬಿಐ
ಮುಂಬೈ , ಶನಿವಾರ, 21 ಅಕ್ಟೋಬರ್ 2017 (20:17 IST)
ಮುಂಬೈ: ಎಲ್ಲಾ ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಜೋಡಣೆ ಕಡ್ಡಾಯವಲ್ಲ ಎಂಬ ವದಂತಿಯನ್ನು ಆರ್ ಬಿಐ ತಳ್ಳಿಹಾಕಿದೆ. ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಜೋಡಣೆ ಕಡ್ಡಾಯ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ.

ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಜೋಡಣೆ ಕುರಿತು ಆರ್‌ಬಿಐ ಇಂದು ಪ್ರಕಟಣೆ ಹೊರಡಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಎರಡನೇ ತಿದ್ದುಪಡಿ ನಿಯಮ-2017ರ ಅನ್ವಯ ಎಲ್ಲಾ ಪ್ರಕರಣಗಳಲ್ಲೂ ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಜೋಡಣೆ ಕಡ್ಡಾಯವೆಂದು ಆರ್‌ಬಿಐ ಸೂಚಿಸಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ನಿಯಮಗಳು ಶಾಸನಬದ್ಧವಾಗಿ ಜಾರಿಯಲ್ಲಿವೆ. ಮುಂದಿನ ಸೂಚನೆವರೆಗೂ ಕಾಯ್ದೆಯಡಿ ಬ್ಯಾಂಕ್‌‌ಗಳು ತಮ್ಮ ನಿಯಮಗಳನ್ನು ಅನುಷ್ಠಾನಗೊಳಿಸಬೇಕು ಎಂದು ಆರ್‌ಬಿಐ ಸೂಚಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನನಗೆ ಬೆಳೆಸುವುದೂ ಗೊತ್ತು, ಪಕ್ಷದಿಂದ ಹೊರಹಾಕುವುದು ಗೊತ್ತು: ದೇವೇಗೌಡ