ತಿರುವನಂತಪುರಂ : ಸೈಬರ್ ಸುರಕ್ಷತೆ ಈಗ ಕೇರಳದ ಶಾಲಾ ಪಠ್ಯಕ್ರಮದ ಒಂದು ಭಾಗವಾಗಿದೆ.
ರಾಜ್ಯದ ಪ್ರೌಢಶಾಲೆಗಳಲ್ಲಿ ಲಿಟಲ್ ಕೈಟ್ಸ್ ಘಟಕಗಳ ಮೂಲಕ ಮೂರು ಲಕ್ಷ ತಾಯಂದಿರಿಗೆ ಸೈಬರ್ ಸುರಕ್ಷತೆ ತರಬೇತಿ ನೀಡಬೇಕೆಂದು ಸರ್ಕಾರ ನಿರ್ಧರಿಸಿದೆ. ಈ ತರಬೇತಿ ಕೇಂದ್ರವನ್ನು ರಾಜ್ಯ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಉದ್ಘಾಟಿಸಿದರು.
ಈ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಕಾರ್ಯಕ್ರಮದ ಭಾಗವಾಗಿ ಎರಡು ಲಕ್ಷ ತಾಯಂದಿರಿಗೆ ಸೈಬರ್ ಸುರಕ್ಷತೆ ಬಗ್ಗೆ ತರಬೇತಿ ನೀಡಬೇಕು ಎಂಬ ಯೋಜನೆ ಇತ್ತು. ಆದರೆ ನಂತರ ಅದನ್ನು 3 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಸೈಬರ್ ಸುರಕ್ಷತೆ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯ ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ಅಪಾರ ಮೆಚ್ಚುಗೆ ಮತ್ತು ಪ್ರತಿಕ್ರಿಯೆಯನ್ನು ನೋಡಿದ ಅವರು,
ವಿದ್ಯಾರ್ಥಿಗಳು ಮತ್ತು ತಾಯಂದಿರು ಸೇರಿದಂತೆ 10 ಲಕ್ಷ ಫಲಾನುಭವಿಗಳಿಗೆ ಸೈಬರ್ ಸುರಕ್ಷತೆ ತರಬೇತಿಯನ್ನು ನೀಡಲಾಗುವುದು ಎಂದು ಘೋಷಿಸಿದರು.