Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಕಲಿಕೆ ಕಡ್ಡಾಯ!

ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಕಲಿಕೆ ಕಡ್ಡಾಯ!
ಬೆಂಗಳೂರು , ಶನಿವಾರ, 7 ಮೇ 2022 (09:55 IST)
ಬೆಂಗಳೂರು : ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಕಲಿಕೆ ಕಡ್ಡಾಯಗೊಳಿಸಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ ತಿದ್ದುಪಡಿ ಮಾಡಿ ಸರ್ಕಾರ ಅಧಿಸೂಚನೆ ಸೂಚನೆ ಹೊರಡಿಸಿದೆ.

ಈ ನಿಯಮಾವಳಿ ಪ್ರಕಾರ ಸರ್ಕಾರಿ ನೌಕರರು ಇನ್ನುಮುಂದೆ ಕಂಪ್ಯೂಟರ್ ಪರೀಕ್ಷೆ ಪಾಸಾಗದಿದ್ದರೆ ಮುಂಬಡ್ತಿ, ವಾರ್ಷಿಕ ವೇತನ ಭಡ್ತಿ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈವರೆಗೆ ಅಧಿಸೂಚನೆ ಹೊರಡಿಸಿದ 10 ವರ್ಷದೊಳಗೆ ಪರೀಕ್ಷೆ ಪಾಸ್ ಮಾಡಿಕೊಳ್ಳಲು ಅವಕಾಶ ನೀಡಿದ್ದ ಸರ್ಕಾರ.

ಅದಕ್ಕಾಗಿ 2012ರಲ್ಲೇ ಸರ್ಕಾರ ನಿಯಮ ಜಾರಿಗೊಳಿಸಿತ್ತು. ಈಗ ಮತ್ತೆ ತಿದ್ದುಪಡಿ ಮಾಡಿ ಎಲ್ಲಾ ಸರ್ಕಾರಿ ನೌಕರರು 2022 ಡಿಸೆಂಬರ್ ಅಂತ್ಯದೊಳಗೆ ಕಂಪ್ಯೂಟರ್ ಪರೀಕ್ಷೆ ಪಾಸ್ ಮಾಡಿಕೊಳ್ಳುವಂತೆ ಕಡ್ಡಾಯ ಮಾಡಿ ಗಡುವು ವಿಧಿಸಿದೆ. 

ಸರ್ಕಾರಿ ಸೇವೆಯಲ್ಲಿರುವ ಡಿ ಗ್ರೂಪ್ ಹೊರತು ಪಡಿಸಿ ಎಲ್ಲ ನೌಕರರಿಗೂ ಈ ನಿಯಮ ಅನ್ವಯವಾಗಲಿದೆ. 2022 ಡಿಸೆಂಬರ್ 31 ರೊಳಗೆ ಕಂಪ್ಯೂಟರ್ ಪರೀಕ್ಷೆ ಪಾಸ್ ಮಾಡಲು ಸರ್ಕಾರ ಗಡುವು ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಂದೆಯಿಂದ ಅತ್ಯಾಚಾರಕ್ಕೊಳಗಾದ ಮಗಳು ನ್ಯಾಯಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ಮೊರೆ