Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಲಕ್ನೋ : ಮದುವೆ ಮನೆಯಲ್ಲಿ ಹಳೆಯ ಬಾವಿಯ ಸ್ಲ್ಯಾಬ್ ಕುಸಿತಗೊಂಡು ಮಹಿಳೆ, ಮಕ್ಕಳು ಸೇರಿ 11 ಮಂದಿ ಮರಣ ಹೊಂದಿರುವ ಘಟನೆ ಉತ್ತರ ಪ್ರದೇಶದ ಖುಷಿನಗರದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರವೆ ಮನೆಯಲ್ಲಿ ಹಳೆಯ ಬಾವಿಗೆ ಸ್ಲ್ಯಾಬ್ ಅಳವಡಿಸಲಾಗಿತ್ತು. ಸ್ಲಾಬ್ ಮೇಲೆ ಕುಳಿತುಕೊಳ್ಳಲು ಕುರ್ಚಿಗಳನ್ನು ಹಾಕಿದ್ದರು. ಕುರ್ಚಿಗಳ ಮೇಲೆ ಮಹಿಳೆಯರು ಸೇರಿದಂತೆ ಮಕ್ಕಳು ಕುಳಿತುಗೊಂಡಿದ್ದರು. ಈ ವೇಳೆ ಭಾರ ಹೆಚ್ಚಾಗಿ ಸ್ಲ್ಯಾಬ್ ಏಕಾಏಕಿ ಕುಸಿತಗೊಂಡ ಪರಿಣಾಮ 11 ಮಂದಿ ಮರಣ ಹೊಂದಿರುವ ಬಗ್ಗೆ ವರದಿಯಾಗಿದೆ.
ಈ ಬಗ್ಗೆ ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ ಹಿರಿಯ ಅಧಿಕಾರಿಯೊಬ್ಬರು, ಘಟನೆಯಲ್ಲಿ ಸಾವನ್ನಪ್ಪಿದ ಮತ್ತು ತೀವ್ರ ಗಾಯಗೊಂಡಿರುವವರನ್ನು ಆಸ್ಪತ್ರೆಗೆ ದಾಖಲಿಸಿಲಾಗಿದೆ. ಮರಣ ಹೊಂದಿದ ಕುಟುಂಬಗಳಿಗೆ ಸರ್ಕಾರದಿಂದ ಈಗಾಗಲೇ 4 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.