ಅಸ್ಸಾಂ: ಮದುವೆ ಸಂಬಂಧ ನಿರಾಕರಿಸಿದ ತಪ್ಪಿಗೆ ಈ ಯುವತಿ ಇದೀಗ ಜೀವನಪರ್ಯಂತ ಕೊರಗುವಂತೆ ಈ ದುರುಳರು ಮಾಡಿದ್ದಾರೆ.
ಅಸ್ಸಾಂನ ಲಕ್ಷ್ಮೀಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮದುವೆ ಸಂಬಂಧ ನಿರಾಕರಿಸಿದ್ದಕ್ಕೆ ಯುವತಿ ಮೇಲೆ ವ್ಯಕ್ತಿಯೊಬ್ಬ ಆಸಿಡ್ ದಾಳಿ ಮಾಡಿದ್ದಾನೆ.
ಕಾಲೇಜಿನಿಂದ ಮರಳುತ್ತಿದ್ದ ಬಲವಂತವಾಗಿ ಕಾರಿನೊಳಗೆ ಎಳೆದೊಯ್ದ ಯುವಕ ಯುವತಿ ಮೇಲೆ ಆಸಿಡ್ ಎರಚಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇದೀಗ ಯುವತಿಯ ಮುಖ ಸುಟ್ಟು ಹೋಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆರೋಪಿಯನ್ನು ಬಂಧಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.