ಬೆಂಗಳೂರು: ಮಹಿಳೆಯರು ಗುಪ್ತಾಂಗದ ಸಮಸ್ಯೆಗಳ ಬಗ್ಗೆ ಯಾರಲ್ಲೂ ಹೇಳಿಕೊಳ್ಳಲಾಗದೇ ಸಂಕಟಪಡುತ್ತಾರೆ. ಯೋನಿಯಲ್ಲಿ ಸಮಾನ್ಯವಾಗಿ ಬರುವ ತುರಿಕೆ, ನೋವು ಇತ್ಯಾದಿಗೆ ಹಲವು ಕಾರಣಗಳಿರಬಹುದು. ಅವು ಯಾವುವು ನೋಡೋಣ.
ಬ್ಯಾಕ್ಟೀರಿಯಾ
ಯೋನಿಯಲ್ಲಿ ಬ್ಯಾಕ್ಟೀರಿಯಾ ಸಮಸ್ಯೆಯಿಂದಾಗಿ ಉರಿ, ಮೂತ್ರಿಸುವಾಗ ನೋವು, ವಾಸನೆ ಇತ್ಯಾದಿ ಕಾಣಿಸಿಕೊಳ್ಳಬಹುದು.
ಮೂತ್ರ ಸೋಂಕು
ಮೂತ್ರ ಸೋಂಕಿನಿಂದಾಗಿ ದುರ್ವಾಸನೆ, ಉರಿ, ನೋವು, ತುರಿಕೆ, ಕೆಳ ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇತ್ಯಾದಿ ಲಕ್ಷಣಗಳು ಮೂತ್ರ ಸೋಂಕಿನದ್ದಾಗಿರಬಹುದು.
ಲೈಂಗಿಕ ರೋಗಗಳು
ಗುಪ್ತಾಂಗದಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಅದು ಲೈಂಗಿಕ ರೋಗಗಳ ಲಕ್ಷಣ ಅಥವಾ ಗರ್ಭಾಶಯಕ್ಕೆ ಸಂಬಂಧಿಸಿದ ಸಮಸ್ಯೆಯ ಮೂಲವಾಗಿರಬಹುದು.
ಮುಟ್ಟು ನಿಲ್ಲುವ ಸೂಚನೆ
ಮುಟ್ಟು ನಿಲ್ಲುವ ಸಂದರ್ಭದಲ್ಲಿ ಗುಪ್ತಾಂಗದಲ್ಲಿ ನೋವು, ಡ್ರೈನೆಸ್, ಉರಿಯಿಂದ ಕೂಡಿದ ಮೂತ್ರ ವಿಸರ್ಜನೆ ಇತ್ಯಾದಿ ಲಕ್ಷಣಗಳು ಕಂಡುಬರಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.