Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮದುವೆ ಬಗ್ಗೆ ಡೀಟೈಲ್ಸ್ ಬಿಟ್ಟುಕೊಟ್ಟ ಸೈನಾ ನೆಹ್ವಾಲ್

ಮದುವೆ ಬಗ್ಗೆ ಡೀಟೈಲ್ಸ್ ಬಿಟ್ಟುಕೊಟ್ಟ ಸೈನಾ ನೆಹ್ವಾಲ್
ಹೈದರಾಬಾದ್ , ಸೋಮವಾರ, 8 ಅಕ್ಟೋಬರ್ 2018 (10:25 IST)
ಹೈದರಾಬಾದ್: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಪುರುಷರ ಬ್ಯಾಡ್ಮಿಂಟನ್ ಚಾಂಪಿಯನ್ ಪಾರುಪಳ್ಳಿ ಕಶ್ಯಪ್ ರನ್ನು ಮದುವೆಯಾಗುತ್ತಿರುವ ಸುದ್ದಿ ಎಲ್ಲರೂ ಓದಿರುತ್ತೀರಿ.

ಡಿಸೆಂಬರ್ 16 ರಂದು ಈ ತಾರಾ ಜೋಡಿ ಮದುವೆಯಾಗಲಿದ್ದಾರೆ ಎಂದು ಸುದ್ದಿ ಬಂದಿತ್ತು. ಇದರ ಬಗ್ಗೆ ಇದೀಗ ಸ್ವತಃ ಸೈನಾ ನೆಹ್ವಾಲ್ ಬಾಯ್ಬಿಟ್ಟಿದ್ದಾರೆ.

‘ಡಿಸೆಂಬರ್ 16 ರಂದು ಮಾತ್ರ ನನಗೆ ಮದುವೆಯಾಗಲು ಪುರುಸೊತ್ತಿದೆ. ಅದಕ್ಕೆ ಅದೇ ದಿನವೇ ನಾವು ಮದುವೆಯಾಗಬೇಕಷ್ಟೇ. ಡಿಸೆಂಬರ್ 20 ರ ನಂತರ ಬ್ಯಾಡ್ಮಿಂಟನ್ ಲೀಗ್ ನಲ್ಲಿ ಬ್ಯುಸಿಯಾಗುತ್ತೇನೆ’ ಎಂದು ಸೈನಾ ನೆಹ್ವಾಲ್ ಹೇಳಿದ್ದಾರೆ.

‘ಮುಂದಿನ ವರ್ಷ ನಾವಿಬ್ಬರೂ ನಮ್ಮ ಪಂದ್ಯಗಳಲ್ಲಿ ಬ್ಯುಸಿಯಾಗುತ್ತೇವೆ. ಕೆಲವೊಮ್ಮೆ ಜತೆಗೇ ಟೂರ್ನಮೆಂಟ್ ನಲ್ಲಿ ಆಡುತ್ತೇವೆ. ಇಂತಹ ಸ್ಪರ್ಧಾತ್ಮಕ ಯುಗದಲ್ಲಿ ಇಬ್ಬರು ಜೋಡಿಯಾಗುವುದೇ ಕಷ್ಟ. ಅಂತಹದ್ದರಲ್ಲಿ ನಾವು ಪಂದ್ಯದ ಬಗ್ಗೆ ಮಾತನಾಡುತ್ತಲೇ ಒಬ್ಬರಿಗೊಬ್ಬರು ಹತ್ತಿರವಾದೆವು’ ಎಂದು ಸೈನಾ ಕಶ್ಯಪ್ ಬಗ್ಗೆ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಗಾಗಿ ಕೊಹ್ಲಿ ಮಾಡಿದ ಮನವಿಗೆ ಬಿಸಿಸಿಐ ತಕ್ಷಣಕ್ಕೆ ನಿರ್ಧಾರವಿಲ್ಲ