ನವದೆಹಲಿ: ದೆಹಲಿಯ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಒದಗಿಸಲು ಸರ್ಕಸ್ ಮಾಡುತ್ತಿರುವ ದೆಹಲಿ ಸಿಎಂ ಕೇಜ್ರಿವಾಲ್ ಸರ್ಕಾರ ಇದೀಗ ಶಬ್ಧ ಮಾಲಿನ್ಯ ತಡೆಗೆ ವಿನೂತನ ಕಾರ್ಯಕ್ರಮ ಜಾರಿಗೆ ತಂದಿದೆ.
ಇನ್ನು ಮುಂದೆ ದೆಹಲಿ ರಸ್ತೆಗಳಲ್ಲಿ ವಿನಾಕಾರಣ ವಾಹನಗಳು ಹಾರ್ನ್ ಮಾಡುವಂತಿಲ್ಲ. ಈ ರೀತಿ ಮಾಡಿದರೆ 500 ರೂ. ದಂಡ ತೆರಬೇಕಾಗಬಹುದು. ಶಬ್ಧ ಮಾಲಿನ್ಯ ತಡೆಗೆ ಸರ್ಕಾರ ಇಂತಹದ್ದೊಂದು ವಿನೂತನ ಕಾರ್ಯಕ್ರಮ ಜಾರಿಗೆ ತಂದಿದೆ.
ಟ್ರಾಫಿಕ್ ನಲ್ಲಿ ಸಿಲುಕಿಕೊಂಡು ವಾಹನ ಮುಂದೆ ಹೋಗದೇ ಇದ್ದಾಗ ವಿನಾಕಾರಣ ಹಾರ್ನ್ ಹೊಡಿಯುವುದು, ಸಿಕ್ಕ ಸಿಕ್ಕ ಹಾಗೆ ಕರ್ಕಶವಾಗಿ ಹಾರ್ನ್ ಮಾಡುವುದೆಲ್ಲಾ ಇನ್ನು ದೆಹಲಿ ರಸ್ತೆಯಲ್ಲಿ ನಿಷಿದ್ಧವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ