ಭೋಪಾಲ್ : ತನ್ನ 15 ತಿಂಗಳ ಮಗನನ್ನು ರಕ್ಷಿಸಲು ಬರಿಗೈಯಲ್ಲಿ ಮಹಿಳೆಯೊಬ್ಬರು ಹುಲಿಯೊಂದಿಗೆ ಹೋರಾಡಿರುವ ಅಚ್ಚರಿದಾಯಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
25 ವಯಸ್ಸಿನ ಅರ್ಚನಾ ಚೌಧರಿ ಭಾನುವಾರ ರಾತ್ರಿ ಅಳುತ್ತಿದ್ದ ಮಗನನ್ನು ಸಮಾಧಾನಪಡಿಸುತ್ತಾ ಮನೆಯಿಂದ ಹೊರ ಬಂದಿದ್ದಾಳೆ. ಈ ವೇಳೆ ಸಮೀಪದ ಬಾಂಧವಗಢ ಹುಲಿ ಸಂರಕ್ಷಿತಾರಣ್ಯದಿಂದ ದಾರಿ ತಪ್ಪಿ ಬಂದಿದ್ದ ಹುಲಿಯು ಹೊಲಗಳಲ್ಲಿ ಅಡಗಿ ಕುಳಿತ್ತು. ನಂತರ ದಾಳಿ ನಡೆಸಿದೆ.
ಈ ವೇಳೆ ಅಚಾನಕ್ ದಾಳಿ ನಡೆಸಿದ ಹುಲಿ, ಮಹಿಳೆಯ ಮಗುವನ್ನು ದವಡೆಯಲ್ಲಿ ಹಿಡಿಯಿತು. ಮಹಿಳೆ ತನ್ನ ಮಗುವನ್ನು ಬಿಡದೇ ಹುಲಿಯೊಂದಿಗೆ ಹೋರಾಡಿದ್ದಾಳೆ. ಆಗ ಬಾಲಕನನ್ನು ಬಲವಾಗಿ ಎಳೆದುಕೊಳ್ಳಲು ಹುಲಿ ಪ್ರಯತ್ನಿಸಿ ವಿಫಲವಾಗಿದೆ.
ಈ ವೇಳೆ ಮಹಿಳೆ ಜೋರಾಗಿ ಕಿರುಚಿದ್ದಾಳೆ. ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಇದರಿಂದ ಭಯಗೊಂಡ ಹುಲಿ ಕಾಡಿನೊಳಕ್ಕೆ ನುಗ್ಗಿದೆ.