Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಮೆರಿಕ ನ್ಯಾಯಾಧೀಶರಾಗಿ ಅರುಣ್ ಸುಬ್ರಮಣಿಯನ್ ನಾಮನಿರ್ದೇಶನ

ಅಮೆರಿಕ ನ್ಯಾಯಾಧೀಶರಾಗಿ ಅರುಣ್ ಸುಬ್ರಮಣಿಯನ್ ನಾಮನಿರ್ದೇಶನ
ವಾಷಿಂಗ್ಟನ್ , ಗುರುವಾರ, 8 ಸೆಪ್ಟಂಬರ್ 2022 (13:27 IST)
ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ನ್ಯೂಯಾರ್ಕ್ನ ದಕ್ಷಿಣ ಜಿಲ್ಲೆಯ ನ್ಯಾಯಾಲಯಕ್ಕೆ ಭಾರತ ಮೂಲದ ಅಮೆರಿಕದ ವಕೀಲ ಅರುಣ್ ಸುಬ್ರಮಣಿಯನ್ ಅವರನ್ನು ನಾಮನಿರ್ದೇಶನ ಮಾಡಿದ್ದಾರೆ.

ಶ್ವೇತಭವನದ ವರದಿಯ ಪ್ರಕಾರ, ಅಧ್ಯಕ್ಷ ಬೈಡನ್ ಅವರು ಇನ್ನಿತರ ನ್ಯಾಯಾಧೀಶರ ನೇಮಕವನ್ನೂ ಮಾಡಿದ್ದಾರೆ. ಆದರೆ ಈ ಮಾಹಿತಿಯನ್ನು ಸೆನೆಟ್ ಇನ್ನೂ ಬಹಿರಂಗಪಡಿಸಿಲ್ಲ.

ಸುಬ್ರಮಣಿಯನ್ ಅವರು ಅಮೆರಿಕದ ಜಿಲ್ಲಾ ನ್ಯಾಯಾಧೀಶರಾಗಿ ನೇಮಕವಾಗುವ ದಕ್ಷಿಣ ಏಷ್ಯಾ ರಾಷ್ಟ್ರದ ಮೊದಲ ವ್ಯಕ್ತಿಯಾಗಲಿದ್ದಾರೆ. 

ಸುಬ್ರಮಣಿಯನ್ ಅವರು 2001 ರಲ್ಲಿ ಕೇಸ್ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾಲಯದಲ್ಲಿ ಬಿ.ಎ ಪದವಿ ಪಡೆದಿದ್ದು, 2004 ರಲ್ಲಿ ಕೊಲಂಬಿಯಾ ಕಾನೂನು ಶಾಲೆಯಿಂದ ಜ್ಯೂರಿಸ್ ಡಾಕ್ಟರ್(ಜೆಡಿ) ಪದವಿಯನ್ನು ಪಡೆದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ತಂಗಿ ಮೇಲೆ ಅಣ್ಣನಿಂದಲೇ ಅತ್ಯಾಚಾರ!