Publish Date: Fri, 26 Aug 2022 (08:55 IST)
Updated Date: Fri, 26 Aug 2022 (09:41 IST)
ಭೋಪಾಲ್ : 16 ವರ್ಷದ ಚಿಕ್ಕಮ್ಮನ ಮಗಳು ಹಾಗೂ 65 ವರ್ಷದ ಸ್ವಂತ ಅಜ್ಜಿಯ ಮೇಲೆಯೇ ಸಹೋದರರಿಬ್ಬರು ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.
ರಕ್ಷಾಬಂಧನ ದಿನದಂದು ದೆಹಲಿಯಿಂದ ಬಂದಿದ್ದ ಇಬ್ಬರು ಅತ್ಯಾಚಾರ ಎಸಗಿದ್ದಾರೆ. 21-22 ವರ್ಷದ ಸಹೋದರರು ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದು, ಬಳಿಕ ಥಳಿಸಿದ್ದಾರೆ.
ಇದೇ ಆಗಸ್ಟ್ 20 ರಂದು ಸಂತ್ರಸ್ತೆ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೇ ಬಾಲಕಿ ಮೇಲಿನ ಅತ್ಯಾಚಾರ ತಡೆಯಲು ಮುಂದಾದ ಅಜ್ಜಿಯ ಮೇಲೂ ಅತ್ಯಾಚಾರ ಎಸಗಿದ್ದಾರೆ ಎಂದು ಅಜ್ಜಿ ದೂರಿನಲ್ಲಿ ತಿಳಿಸಿದ್ದಾರೆ.