Publish Date: Wed, 29 Apr 2020 (16:56 IST)
Updated Date: Wed, 29 Apr 2020 (16:59 IST)
ಕಪ್ಪು ಕೋತಿಗೆ ಗುಂಡಿಕ್ಕಿ ಕೊಂದು ಬಿಡಬೇಕು. ಹೀಗಂತ ಆಗ್ರಹಿಸಿ ಜನರು ಲಾಕ್ ಡೌನ್ ನಡುವೆ ಪ್ರತಿಭಟನೆಗೆ ಇಳಿದಿದ್ದಾರೆ.
ಕಳೆದ ಹದಿನೈದು ದಿನಗಳಿಂದ ಕಪ್ಪು ಕೋತಿ(ಮುಸ್ಯಾ) ಒಂದು ಜನರನ್ನು ಕಚ್ಚುತ್ತಲೇ ಇದೆ. ಅದರಲ್ಲಿಯೂ ಹೊಲ-ಗದ್ದೆಗಳಲ್ಲಿ ಕೆಲಸ ಮಾಡುತ್ತಿರುವ ರೈತರಿಗೆ ಹೆಚ್ಚಾಗಿ ಕಚ್ಚಿ ಪರಾರಿಯಾಗುತ್ತಿದೆ.
ಬಾಗಲಕೋಟೆ ಜಿಲ್ಲೆ ಬಾದಾಮಿಯ ಕಬ್ಬಲಗೇರಿ, ಬಾದಾಮಿ, ಕೇರ್ ಓಣಿ ನಿವಾಸಿಗಳಂತೂ ಕಪ್ಪು ಕೋತಿ ಕಚ್ಚಾಟಕ್ಕೆ ರೋಸಿ ಹೋಗಿದ್ದಾರೆ.
ಕೋತಿಯನ್ನು ಹಿಡಿದು ಬೇರೆ ಕಡೆ ಸಾಗಿಸಿ ಇಲ್ಲವೇ ಅದಕ್ಕೆ ಗುಂಡಿಕ್ಕಿ ಕೊಂದುಬಿಡಿ ಅಂತ ಆಗ್ರಹಿಸಿ ಜನರು ಅರಣ್ಯ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.