Publish Date: Sun, 29 Sep 2019 (17:09 IST)
Updated Date: Sun, 29 Sep 2019 (17:11 IST)
ಮಧ್ಯವಯಸ್ಸು ಮೀರಿದ ಮಹಿಳೆಯೊಬ್ಬಳನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ ಆರೋಪಿ ಕೊನೆಗೂ ಸಿನಿಮೀಯ ರೀತಿಯಲ್ಲಿ ಸಿಕ್ಕು ಬಿದ್ದಿದ್ದಾನೆ.
ಥಾಣೆ ಪ್ರದೇಶದ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬಳು ಮನೆಗೆ ಹೋಗುತ್ತಿದ್ದಾಗ ದಾರಿ ನಡುವೆ ಅಡ್ಡಗಟ್ಟಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಆರೋಪಿಯೊಬ್ಬ ಅತ್ಯಾಚಾರ ನಡೆಸಿದ್ದನು.
ಆರೋಪಿಯನ್ನು ಬಿಡಿಸಿಕೊಳ್ಳುವ ಭರದಲ್ಲಿ ಸಂತ್ರಸ್ಥೆಯು ಆತನ ಎದೆಗೆ ಬಲವಾಗಿ ಕಚ್ಚಿದ್ದಳು.
ಪ್ರಕರಣ ಜಾಡು ಹಿಡಿದ ಪೊಲೀಸರು ಆರೋಪಿ ಲಖನ್ ದೇವಕರ ಎಂಬಾತನನ್ನು ಬಂಧಿಸಿದ್ದಾರೆ.