ಹಾವು ಕಚ್ಚಿ ಸಾಯುತ್ತಿರುವ ವ್ಯಕ್ತಿಯೊಬ್ಬ ಚಿಕಿತ್ಸೆಗಾಗಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿದ್ರೆ ಅಲ್ಲಿನ 12 ಜನ ಸಿಬ್ಬಂದಿಗಳಲ್ಲಿ ಒಬ್ಬರೇ ಒಬ್ಬ ಸಿಬ್ಬಂದಿ ಇದ್ದಿದ್ದಿಲ್ಲ.
ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕರ್ಮಕಾಂಡ ಮತ್ತೊಮ್ಮೆ ಬಯಲಾಗಿದೆ. ಹಾವು ಕಚ್ಚಿ ಸಾಯುತ್ತಿರುವವರಿಗೂ ಇಲ್ಲಿ ಚಿಕಿತ್ಸೆ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಗ್ರಾಮದಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಈ ಅವ್ಯವಸ್ಥೆ ಕಂಡು ಬಂದಿದೆ.
12 ಜನ ಸಿಬ್ಬಂದಿಗಳಿರುವ ಆಸ್ಪತ್ರೆ ಇದಾಗಿದೆ. ಆದರೆ ಹಾವು ಕಚ್ಚಿದ ಹಿನ್ನೆಲೆಯಲ್ಲಿ ಯುವಕನೊಬ್ಬ ಆಸ್ಪತ್ರೆಗೆ ಬಂದಾಗ ಒಬ್ಬರೇ ಒಬ್ಬ ಸಿಬ್ಬಂದಿ ಆಸ್ಪತ್ರೆಯಲ್ಲಿ ಇದ್ದಿದ್ದಿಲ್ಲ. ಕೇಳಿದರೆ ಉಡಾಫೆ ಉತ್ತರ ನೀಡಿರುವ ವೈದ್ಯರು ಹಾಗೂ ಸಿಬ್ಬಂದಿಯ ಕ್ರಮಕ್ಕೆ ಸಾರ್ಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಕ್ರೋಶಗೊಂಡ ಜನರಿಂದ ವೈದ್ಯೆ ಸಂಧ್ಯಾ ಹಾಗೂ ಸಿಬ್ಬಂದಿ ವಿರುದ್ಧ ಕಿಡಿಕಾರಿದ್ದಾರೆ. ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ರು.