ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಯೆಸ್ ಬ್ಯಾಂಕಿನ ಸ್ಥಾಪಕ ರಾಣಾ ಕಪೂರ್ ನನ್ನು ಬಂಧನ ಮಾಡಲಾಗಿದೆ.
ಅಕ್ರಮ ಹಣ ವರ್ಗಾವಣೆ ಕೇಸ್ ಸಂಬಂಧವಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಸುಕಿನ ವೇಳೆಯಲ್ಲಿ ಬಂಧನ ಮಾಡಿ ಕೋರ್ಟ್ ಗೆ ಹಾಜರುಪಡಿಸಿದ್ದಾರೆ.
ಮಾರ್ಚ್ 11 ರವರೆಗೆ ಇಡಿ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಇಡಿ ತನಿಖೆ ಬಳಿಕ ಸಿಬಿಐ ಸಮಗ್ರ ತನಿಖೆ ನಡೆಸಲಿದೆ. ಪೂರ್ಣ ತನಿಖೆಯನ್ನು ಕೇಂದ್ರಿಯ ತನಿಖಾ ಸಂಸ್ಥೆ ಕೈಗೆ ತೆಗೆದುಕೊಳ್ಳಲು ಸಿದ್ಧತೆಯನ್ನು ಶುರುಮಾಡಿದೆ. ಯೆಸ್ ಬ್ಯಾಂಕ್ ನಿಂದ ಕಾರ್ಪೋರೇಟ್ ಸಂಸ್ಥೆಗಳಿಗೆ ಸಾಲ ನೀಡಿರುವ ಕುರಿತು ತನಿಖೆ ನಡೆಯುತ್ತಿದ್ದು, ತನಿಖೆಗೆ ರಾಣಾ ಕಪೂರ್ ಸಮರ್ಪಕವಾಗಿ ಸ್ಪಂದನೆ ಮಾಡುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ಬಂಧನ ಮಾಡಲಾಗಿದೆ.