Publish Date: Wed, 21 Jun 2023 (17:55 IST)
Updated Date: Wed, 21 Jun 2023 (18:00 IST)
ಧರ್ಮಸ್ಥಳ ಬಳಿ ಸಾರಿಗೆ ಬಸ್ ನಿರ್ವಾಹಕನಿಗೆ ಮಹಿಳೆಯರ ತರಾಟೆ ತೆಗೆದುಕೊಂಡಿದ್ದಾರೆ.. ಧರ್ಮಸ್ಥಳ ಬಳಿ ನಡೆದ ಘಟನೆಯ ವಿಡಿಯೋ ಸದ್ಯ ವೈರಲ್ ಆಗಿದ್ದು, ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಹಿನ್ನೆಲೆ ಮಹಿಳೆಯರಿಗೆ ಅವಕಾಶ ನೀಡದೆ ಸಾರಿಗೆ ಬಸ್ ಸಂಚಾರ ಮಾಡುತ್ತಿದ್ದಾರೆ ಅಂತಾ ಮಹಿಳೆಯರು ಆರೋಪಿಸಿದ್ದಾರೆ.. ಧರ್ಮಸ್ಥಳದಿಂದ ಹೊಸಪೇಟೆಗೆ ಈ ಸಾರಿಗೆ ಬಸ್ ತೆರಳುತಿತ್ತು. ಬಸ್ ನಿಲ್ಲಿಸದೆ ಮಹಿಳೆಯರು ಬಸ್ ಹತ್ತಲು ಅವಕಾಶ ಕೊಟ್ಟಿಲ್ಲವೆಂದು ಬಸ್ ನಿರ್ವಾಹಕನ ಮೇಲೆ ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ