Publish Date: Wed, 21 Jun 2023 (16:32 IST)
Updated Date: Wed, 21 Jun 2023 (17:44 IST)
ಪಂಪ ಕ್ಷೇತ್ರ ಹಂಪಿಯಲ್ಲಿ ಜೆಸಿಬಿಗಳ ಘರ್ಜನೆ ಜೋರಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿರುವ ಹೊಂ ಸ್ಟೇಗಳು, ವಾಣಿಜ್ಯ ಚಟುವಟಿಕೆಗಳು ಕಟ್ಟಡಗಳ ತೆರವಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಹಂಪಿ, ಹೊಸ ಹಂಪಿ, ಕಡ್ಡಿರಾಂಪುರ, ಕಮಲಾಪುರ ಭಾಗದ ನಾನಾ ಕಡೆ ಅನಧಿಕೃತವಾಗಿ ನಿರ್ಮಾಣ ಮಾಡಿರೋ ಹೊಂ ಸ್ಟೇಗಳನ್ನು ತೆರುವು ಮಾಡಲಾಗಿದೆ. ಹೊಂ ಸ್ಟೇಗಳಿಗೆ ಜೆಸಿಬಿ ಹಾಕಿದಂತೆಯೇ ಮಾಲಿಕರು ಗಳಗಳನೆ ಕಣ್ಣಿರು ಸುರಿಸಿ ಇಲಾಖೆ ಅಧಿಕಾರಿಗಳು, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದ್ದಾರೆ.