Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೇಸರಿ ಪಾಳಯದಲ್ಲಿ ಹೆಚ್ಚಾಯ್ತಾ ಆಂತರಿಕ ಕಲಹ...?

ಕೇಸರಿ ಪಾಳಯದಲ್ಲಿ ಹೆಚ್ಚಾಯ್ತಾ ಆಂತರಿಕ ಕಲಹ...?
bangalore , ಮಂಗಳವಾರ, 12 ಡಿಸೆಂಬರ್ 2023 (19:00 IST)
ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿ ಹೋಯ್ತು ಅನ್ನುವಷ್ಟರಲ್ಲಿ ಮತ್ತೊಂದೆನೋ ಬಂದು ವಕ್ಕರಿಸಿತು ಅನ್ನುವಂತೆ, ಮತ್ತದೇ ಹಾಡಿನ ರಾಗ ಕೇಳಿ ಬಂದಿದೆ.. ದಿನದಿಂದ ದಿನಕ್ಕೆ ರಾಜ್ಯ ಬಿಜೆಪಿಯಲ್ಲಿ ಆತಂರಿಕ ಸಂಘರ್ಷ ಮಿತಿ ಮೀರಿ ಹೋಗುತ್ತಿದೆ. ಪಕ್ಷದ ಹಲವು ನಾಯಕರು ಬಹಿರಂಗವಾಗಿಯೆ ಪಕ್ಷಕ್ಕೆ ಡ್ಯಾಮೇಜ್‌ನ್ನು ತಂದಿಡುವ ಸಂದರ್ಭವನ್ನು ಸೃಷ್ಟಿಸಿಸುತ್ತಿದ್ದಾರೆ. ಆ ಕಡೆ ರಾಜ್ಯ ಬಿಜೆಪಿಯನ್ನು ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಸಂಘಟನಾತ್ಮವಾಗಿ ಪಕ್ಷವನ್ನು ಬಲಿಷ್ಟಗೊಳಿಸುವ ಚಿಂತನೆ ಮಾಡಿದ್ದ, ಡೆಲ್ಲಿಯ ವರಿಷ್ಠರ ಪ್ಲಾö್ಯನ್ ಉಲ್ಟಾಪಟ್ಟಾವಾಗುವ ಹಂತಕ್ಕೆ ಬಂದು ನಿಂತಿದೆ..!
 
ಕೇಸರಿ ಪಾಳಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಆಗ್ತಾ ಇರೋದಂತು ಸತ್ಯ. ಬಿಜೆಪಿಯ ಹೈಕಮಾಂಡ್‌ಗೆ ಆರೇಳು ತಿಂಗಳಿನಿAದ ಒಬ್ಬ ವಿರೋಧ ಪಕ್ಷದ ನಾಯಕನನ್ನು ಆರಿಸೋದೇ ದೊಡ್ಡ ಹರಸಾಹಸವಾಗಿತ್ತು. ಇದರ ಜೊತೆಗೆ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೂ ಕೂಡ ಸಮರ್ಥವಾದ, ಪಕ್ಷವನ್ನು ಕಟ್ಟಿಬೆಳೆಸುವಂತಹ ಲೀಡರ್‌ನ್ನು ತಂದೂ ಕೂರಿಸೋದಕ್ಕೆ ಬಿಜೆಪಿ ಹೈಕಮಾಂಡ್‌ಗೆ ದೊಡ್ಡ ತಲೆನೋವನ್ನು ತಂದಿಟ್ಟಿತ್ತು.

ಆದರೆ ಫೈನಲೀ ವಿಪಕ್ಷ ನಾಯಕ ಮತ್ತು ನೂತನ ರಾಜ್ಯಾಧ್ಯಕ್ಷ ಆಯ್ಕೆ ಎರಡು ಕೂಡ ಬಿಜೆಪಿಯಲ್ಲಿ ನಡೆದು ಹೋಗಿದೆ.. ವಿಪಕ್ಷ ನಾಯಕ ಪಟ್ಟಕ್ಕೆ ಆರ್, ಅಶೋಕ್, ಮತ್ತು ಬಿಜೆಪಿಯ ನೂತನ ಸಾರಥಿಯಾಗಿ ಬಿಎಸ್‌ವೈ ಪುತ್ರನಿಗೆ ಬಿಜೆಪಿಯ ವರಿಷ್ಠರು ಮಣೆ ಹಾಕಿದ್ದರು..
 
ಎಲ್ಲವೂ ಸುಖಾಂತ್ಯವಾಯ್ತಲ್ಲ ಅನ್ನುವಷ್ಟರಲ್ಲಿ ಬಿಜೆಪಿಯ ವರಿಷ್ಠರ ಪಾಲಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ... ರಾಜ್ಯ ಬಿಜೆಪಿಯಲ್ಲಿ ಒಬ್ಬೊಬ್ಬ ನಾಯಕನದ್ದು ಒಂದೊAದು ದಾರಿ ಆಗಿದೆ. ಅವರೊಂದು ಹೇಳಿಕೆ ಕೊಟ್ಟರೇ, ಈ ಕಡೆಗೆ ಇರ‍್ಯಾರೋ ಇನ್ನೊಂದೆನೊ ಪಕ್ಷಕ್ಕೆ ಇರಿಸಿ ಮುರಿಸು ತರುವಂತಹ ಇನ್ನೊಂದೆನೋ ಮಾತಾಡಿ ಆಡಳಿತ ಪಕ್ಷ ಕಾಂಗ್ರೆಸ್‌ನ ಬಾಯಿಗೆ ಆಹಾರವಾಗುವಂತಹ ಸನ್ನಿವೇಶ ಸೃಷ್ಟಿಸಿಕೊಳ್ತಾರೆ. ಜಸ್ಟ್ ಈಗ ರಾಜ್ಯ ಬಿಜೆಪಿಯಲ್ಲಿ ಆಗ್ತಾ ಇರೋದೆ ಇಂತಹದ್ದೇ ವಿದ್ಯಮಾನಗಳು...
 
ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ಅಶಿಸ್ತಿನ ವರ್ತನೆ ಮಿತಿ ಮೀರಿ ಹೋಗಿದೆ. ಒಂದು ಕಡೆ ಜೋಡೆತ್ತುಗಳಂತೆ ಪಕ್ಷವನ್ನು ಬಲಿಷ್ಠಗೊಳಿಸುತ್ತೇವೆ ಅಂತ ಅಖಾಡಕ್ಕೆ ಇಳಿದಿರುವ ವಿಪಕ್ಷ ನಾಯಕ ಅಶೋಕ್, ಮತ್ತು ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಕೇಸರಿ ಪಾಳಯದಲ್ಲೇ ಸರಿಯಾದ ಬೆಂಬಲ ಸಿಕ್ತಿಲ್ಲ. ಇವರಿಬ್ಬರ ಆಯ್ಕೆಯ ವಿರುದ್ದವೇ ಸೀನಿರ‍್ಸ್ ಲೀರ‍್ಸ್ ಅಪಸ್ವರ ಎತ್ತಿದ್ದಾರೆ....
 
ಬೇಕಾಬಿಟ್ಟಿಯಾಗಿ ಮಾತನಾಡದೇ ಇದ್ದರೇ, ರಾಜ್ಯ ಬಿಜೆಪಿಯಲ್ಲಿ ಯಾವುದೇ ಕಾರಣಕ್ಕೂ ಅಸಮಾಧಾನ, ಭಿನ್ನಭಿಪ್ರಾಯ, ಒಳಬೇಗುದಿ ಇತ್ಯಾದಿ, ಇತ್ಯಾದಿಗಳು ಬೇರು ಬಿಟ್ಟುಕೊಳ್ಳೊದು ಅಸಾಧ್ಯ. ಆದರೆ ಪಕ್ಷದ ಚೌಕಟ್ಟನ್ನು ಮೀರಿ ವರ್ತಿಸಿ ಬಿಟ್ಟರೇ, ಏನಾಗುತ್ತೆ ಅನ್ನೊದಕ್ಕೆ ಈಗ ಬಿಜೆಪಿಯಲ್ಲಿ ಏನು ನಡೆಯುತ್ತಿದೆಯೋ ಅದೇ ದೊಡ್ಡ ನಿದರ್ಶನ..! ಒಟ್ಟಿನಲ್ಲಿ ಬಿಜೆಪಿಯಲ್ಲಿಗ ಮನೆಯೊಂದು ಮೂರು ಬಾಗಿಲು ಅನ್ನುವ ಸಂಕಷ್ಟ ತಲೆದೂರಿದೆ.
 
ಹಲವು ಹಿರಿಯ ನಾಯಕರು ಬಹಿರಂಗವಾಗಿಯೇ ಹೊಟ್ಟೆಗೆ ಬೆಂಕಿ ಬಿದ್ದವರ ತರ, ಉರಿದು ಉರಿದು ಮಾತಿನ ಬೆಂಕಿಯನ್ನು ಉಗುಳುತ್ತಿದ್ದಾರೆ..? ಅದೇನೆ ಇರಲಿ ಹೈÀಕಮಾಂಡ್ ಅಳೆದುತೂಗಿ ಒಂದು ನಿರ್ಧಾರವನ್ನು ತೆಗೆದುಕೊಂಡು, ಹೊಸ ಜೋಡೆತ್ತುಗಳನ್ನು ಆಯ್ಕೆ ಮಾಡಿದ್ದಾರೆ ಅಂದ ಮೇಲೆ ಇದೇನಿದು ಆಡಳಿತ ಪಕ್ಷದ ಮುಂದೆಯೇ, ವಿಪಕ್ಷ ಸ್ಥಾನದಲ್ಲಿನ ಮಾತೃಪಕ್ಷಕ್ಕೆ ಅಗೌರವ ತರುವ ಹಾಗೇ ನಡೆದುಕೊಳ್ಳೊದು..? ದೀಸ್ ಈಸ್ ನಾಟ್ ಫೇರ್...!

Share this Story:

Follow Webdunia kannada

ಮುಂದಿನ ಸುದ್ದಿ

ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ