Select Your Language

Notifications

webdunia
webdunia
webdunia
webdunia

ಹೆಚ್​ಡಿಕೆ ಹೇಳಿಕೆಗೆ ದಿನೇಶ್ ಗುಂಡೂರಾವ್ ತಿರುಗೇಟು

Kumaraswamy
ಸರ್ಕಾರ ಪತನ ಆಗುತ್ತೆ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಅವರಿಗೆ ಅಧಿಕಾರ ಬೇಕು, ಅಧಿಕಾರದ ಆಸೆ. ಅವರಿಗೆ ಗೆಲ್ಲೊಕೆ ಆಗೊಲ್ಲ. ನಮಗೆ ಜನ‌ ಆಶೀರ್ವಾದ ಇದೆ. ಜನರ ವಿಶ್ವಾಸದಿಂದ ನಮ್ಮ ಸರ್ಕಾರ ಬಂದಿದೆ. ಅಧಿಕಾರ ಇಲ್ಲದೆ ಕುಮಾರಸ್ವಾಮಿ ಇರೋಕೆ ಆಗ್ತಾ ಇಲ್ಲ. ಈ ಹಿಂದೆ ಮೈತ್ರಿಯಲ್ಲಿದ್ದಾಗ ಏನಾಯ್ತು ಅಂತ ಅವರಿಗೆ ಗೊತ್ತಿದೆ.

ವಿಪಕ್ಷದಲ್ಲಿ ಇದ್ದುಕೊಂಡು ಹೇಗೆ ಕೆಲಸ ಮಾಡ್ಬೇಕು ಅಂತ ಅವರಿಗೆ ಗೊತ್ತಿದೆ. ಸರ್ಕಾರ ಬೀಳಿಸ್ತೀನಿ ಅಂತ ಹೇಳ್ತಾರೆ, ವಿಪಕ್ಷದಲ್ಲಿ ಇದ್ದುಕೊಂಡು ಈ ಹೇಳಿಕೆ ಸರಿಯಲ್ಲ. ನಮ್ಮ‌ ಎಲ್ಲ ಗ್ಯಾರೆಂಟಿಗಳನ್ನ ನಾವು ಅನುಷ್ಠಾನ ಮಾಡಿದ್ದೀವಿ. ಇನ್ನೂ ಐದು ವರ್ಷ ನಮ್ಮ ಸರ್ಕಾರ ಜನರ ಸೇವೆ ಮಾಡಲಿದೆ. ಇವರಿಗೆ ಜನರ ಬೆಂಬಲ ಇಲ್ಲ. ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಮೀರ್ ವಿವಾದದ ಹೇಳಿಕೆಗೆ ಬಿಜೆಪಿ ಕಿಡಿ