Publish Date: Tue, 16 Jul 2019 (15:36 IST)
Updated Date: Tue, 16 Jul 2019 (15:38 IST)
ಗರ್ಭಿಣಿಯಾಗಿದ್ದ ತನ್ನ ಮಗಳನ್ನೇ ಕೊಲೆ ಮಾಡಿರೋ ಆರೋಪದಲ್ಲಿ ತಂದೆಯೊಬ್ಬನನ್ನು ಬಂಧನ ಮಾಡಲಾಗಿದೆ.
ಗರ್ಭಿಣಿ ಮಹಿಳೆಯು ಪೋಷಕರ ವಿರೋಧದ ನಡುವೆ ತಾನು ಪ್ರೀತಿಸಿದ ಯುವಕನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಳು.
ಆಕೆ ಪ್ರೀತಿಸಿ ಮದುವೆಯಾಗಿದ್ದಕ್ಕೆ ಆಕೆಯ ತಂದೆಯೇ ಮಗಳನ್ನು ಕೊಲೆ ಮಾಡಿದ್ದಾನೆ.
ಮೀನಾಕ್ಷಿ (20) ಕೊಲೆಯಾದ ಗರ್ಭಿಣಿಯಾಗಿದ್ದರೆ, ರಾಜಕುಮಾರ್ ಕೊಲೆ ಮಾಡಿರೋ ಪಾಪಿ ತಂದೆಯಾಗಿದ್ದಾನೆ.
ಮುಂಬೈ ಹೊರವಲಯದಲ್ಲಿರುವ ಘಾಟ್ಕೋಪರ ಪ್ರದೇಶದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.
ಮಗಳ ಕೊಲೆ ಮಾಡಿದ್ದರೂ ಆರಂಭದಲ್ಲಿ ತಂದೆ ರಾಜಕುಮಾರ್ ಏನೂ ಗೊತ್ತಿಲ್ಲದವನಂತೆ ನಟಿಸಿದ್ದನು. ಆದರೆ ಕೊಲೆ ನಡೆದ ದಿನ ಆತನ ಮೊಬೈಲ್ ಫೋನ್ ಲೋಕೇಶನ್ ಕೊಲೆಯಾದ ಸ್ಥಳದಲ್ಲಿತ್ತು ಎಂಬುದನ್ನು ಪೊಲೀಸರು ತನಿಖೆಯಿಂದ ತಿಳಿದುಕೊಂಡಿದ್ದರು. ಮಗಳನ್ನೇ ಕೊಲೆ ಮಾಡಿದ ಪಾಪಿ ರಾಜಕುಮಾರ್ ನನ್ನು ಪೊಲೀಸರು ಬಂಧನ ಮಾಡಿದ್ದಾರೆ.