Publish Date: Mon, 15 Jul 2019 (12:01 IST)
Updated Date: Mon, 15 Jul 2019 (12:03 IST)
ಪರಸ್ಪರ ಪ್ರೀತಿ ಮಾಡುತ್ತಿದ್ದ ಜೋಡಿಯ ನಡುವೆ ಆಗಬಾರದ ಘಟನೆ ಆಗಿ ಹೋಗಿದೆ.
ಅವರಿಬ್ಬರೂ ಜೋಡಿ ಹಕ್ಕಿಗಳಾಗಿದ್ದರು. ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿ ಮೇಲೆ ಯಾರ ಕಣ್ಣು ಬಿತ್ತೋ? ಗೊತ್ತಿಲ್ಲ. ಪ್ರೀತಿ ಮಾಡುತ್ತಿದ್ದ ಪ್ರಿಯಕರನೇ ಆತನ ಪ್ರೇಯಸಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ.
ಮಹಾರಾಷ್ಟ್ರದ ನಾಗಪುರ ಜಿಲ್ಲೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಪ್ರಿಯತಮೆಯ ನಡುವಳಿಕೆ ಮೇಲೆ ಪ್ರಿಯಕರ ಅನುಮಾನ ಮಾಡಿದ್ದೇ ಈ ಕೊಲೆಗೆ ಕಾರಣ ಎನ್ನಲಾಗಿದೆ.
ಋಷಿ ಪರಿಹಾರ್ ಕೊಲೆಯಾದ ಯುವತಿಯಾಗಿದ್ದರೆ, ಆಶ್ರಾಫ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.