Publish Date: Sun, 07 May 2023 (15:18 IST)
Updated Date: Sun, 07 May 2023 (16:28 IST)
AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಸ್ಥರ ಕುರಿತು ಮಣಿಕಂಠ ರಾಠೋಡ್ ಮಾತಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಪತ್ರಿಕ್ರಿಯಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಆಡಿಯೋ ತಿರುಚಲಾಗಿದೆಯೋ ಏನು ನೋಡಬೇಕು. ಆಡಿಯೋ ಬಗ್ಗೆ ಪ್ರಕರಣ ದಾಖಲಿಸಿ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ರು. BJP ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ B.L ಸಂತೋಷ್ ಅವರು ಲಿಂಗಾಯತ ಮತಗಳು ಬೇಡ ಎಂಬ ಸುದ್ದಿ ಫೇಕ್. ಈಗಾಗಲೇ ಈ ಬಗ್ಗೆ ದೂರು ಸಹ ದಾಖಲು ಮಾಡಲಾಗಿದೆ ಎಂದು ತಿಳಿಸಿದ್ರು.