Publish Date: Sun, 07 May 2023 (14:35 IST)
Updated Date: Sun, 07 May 2023 (15:16 IST)
ಮೈಸೂರು : ವರುಣಾ ಹಾಗೂ ಚಾಮರಾಜನಗರದಲ್ಲಿ ಸ್ಪರ್ಧಿಸುತ್ತಿರುವುದು ವಿಧಿನಿಯಮ ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮಗನಿಗೆ ಒಂದು ಸೀಟ್ ಕೊಡಿ ನನಗೆ ಯಾವ ಟಾಸ್ಕ್ ಬೇಡ ಅಂತಾ ಹೈಕಮಾಂಡ್ಗೆ ಹೇಳಿದ್ದೆ. ಹೈಕಮಾಂಡ್ ಇಲ್ಲ ನೀವು ಹೋಗಿ ಎರಡು ಕಡೆ ಸ್ಪರ್ಧೆ ಮಾಡಿ. ನಿಮ್ಮ ಕೈಯಲ್ಲಿ ಇದು ಸಾಧ್ಯ ಅಂತಾ ಹೇಳಿ ನನಗೆ ಎರಡು ಟಿಕೆಟ್ ಕೊಟ್ಟಿದ್ದಾರೆ. ಇದು ವಿಧಿ ನಿಯಮ ಎಂದು ಹೇಳಿದರು.
ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಅವರು, ಸಿದ್ದರಾಮಯ್ಯ ಅವರಿಂದ ವರುಣಾದಲ್ಲಿ ಒಂದು ಸಮುದಾಯಕ್ಕೆ ಮಾತ್ರ ಅನುಕೂಲವಾಗಿದೆ. ಸಿದ್ದರಾಮಯ್ಯ ಅವರ ಎದುರು ನನ್ನ ಕೂರಿಸಿ. ನಾನು ಅವರ ಆರೋಪಗಳಿಗೆ ಉತ್ತರ ಕೊಡುತ್ತೇನೆ. ನಿಮ್ಮ ಜೊತೆ ಹೊರಗಿನಿಂದ ಎಷ್ಟು ಜನ ಬಂದಿದ್ದಾರೆ. ಹಣ ಹಂಚಲು ಯಾರು ಯಾರು ಬಂದಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.