Publish Date: Sun, 07 May 2023 (15:00 IST)
Updated Date: Sun, 07 May 2023 (16:29 IST)
ನಟ ಶಿವರಾಜಕುಮಾರ್ ಪ್ರಚಾರಕ್ಕೆ ಸಂಸದ ಪ್ರತಾಪ್ ಸಿಂಹ, ಸಚಿವ ವಿ. ಸೋಮಣ್ಣ ಟೀಕೆ ಮಾಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಟರು ಯಾವ ಪಕ್ಷದ ಪರ ಬೇಕಾದರೂ ಪ್ರಚಾರ ಮಾಡಬಹುದು. ನಟ ಶಿವರಾಜ್ಕುಮಾರ್ ಅವರು ಪ್ರಚಾರ ಮಾಡಿದರೇ ನನಗೇನು ಅಭ್ಯಂತರ ಇಲ್ಲ. ಕಾಂಗ್ರೆಸ್ ಪರ ಪ್ರಚಾರಕ್ಕೆ ಸೋನಿಯಾ ಗಾಂಧಿ ಸಹ ಬರುತ್ತಿದ್ದಾರೆ. ಇಂದು ಹಾವೇರಿಗೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಬರುತ್ತಿದ್ದಾರೆ. ಮೊದಲಿಗಿಂತಲೂ ಈಗ ಪ್ರಧಾನಿ ಮೋದಿಯವರ ಅಲೆ ಜಾಸ್ತಿಯಾಗಿದೆ ಎಂದರು.. ಇನ್ನು ಮಾಜಿ ಸಚಿವ K.S. ಈಶ್ವರಪ್ಪ ಈ ಕುರಿತು ಮಾತನಾಡಿದ್ದು, ಇನ್ನು ಬಿಜೆಪಿ ನಾಯಕರು ಚಿತ್ರನಟರನ್ನು ಪ್ರಚಾರಕ್ಕೆ ಕರೆಸುತ್ತಾರೆ ಎಂದು ಕಾಂಗ್ರೆಸ್ ಹೇಳುತ್ತಿದೆ.. ಆದರೆ ನಿನ್ನೆ ವರುಣದಲ್ಲಿ ನಟಿ ರಮ್ಯಾ, ದುನಿಯಾ ವಿಜಿ ಕರೆಸಿ ಕಾಂಗ್ರೆಸ್ನವರು ಪ್ರಚಾರ ಮಾಡಿಸಿದ್ರು ಎಂದು ತಿರುಗೇಟು ನೀಡಿದ್ರು.