Publish Date: Tue, 16 May 2023 (15:10 IST)
Updated Date: Tue, 16 May 2023 (15:15 IST)
ಇಂದು ಸುಧಾಕರ್ ಭೇಟಿ ಮಾಡಿದ್ದೀನಿ. ಸೋಮಣ್ಣ ನವರನ್ನೂ ಭೇಟಿ ಮಾಡ್ತೀನಿ.ನಮ್ಮ ಜೊತೆ ಕೆಲಸ ಮಾಡಿದವರು. ಅಲ್ಪ ಪ್ರಮಾಣದಲ್ಲಿ ಸೋತಿದ್ದಾರೆ ಎಂದು ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಧೈರ್ಯತುಂಬೊ ಕೆಲಸ ಮಾಡ್ತಿದೀನಿ.ಸೋಲಿನ ಕಾರಣದ ಬಗ್ಗೆ ಚರ್ಚೆ ಮಾಡಿದ್ದೇವೆ.ಸೋಮಣ್ಣ ಅವರನ್ನೂ ಭೇಟಿ ಮಾಡ್ತೀನಿ.ಏಕಾಯ್ತು , ಏನು ಅಂತ ಪರಾಮರ್ಶೆ ಮಾಡಿದ್ದೇವೆ ಎಂದು ಹಂಗಾಮಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ರು.
ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನ ಹಗ್ಗಜಗ್ಗಾಟ ವಿಚಾರವಾಗಿ ಪ್ರತಿಕ್ರಿಯಿಸಿದ್ದು,ಅದು ಅವರ ಪಕ್ಷದ ವಿಚಾರ ನೋಡೊಣ. ನಾನು ಕಾಯ್ತಿದೀನಿ ಎಂದ್ರು.ಪ್ರವೀಣ್ ಸೂದ್ ಸಿಬಿಐ ನಿರ್ದೇಶಕರಾಗಿರುವ ವಿಚಾರವಾಗಿ ಅದು ಕೇಂದ್ರ ಸರ್ಕಾರದ ನಿರ್ಧಾರ. ಆಲ್ ಇಂಡಿಯಾ ಸರ್ವೀಸ್ ಅದು , ಅವರು ಮಾಡಿದ್ದಾರೆ ಎಂದು ಹಂಗಾಮಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ರು.