Publish Date: Tue, 16 May 2023 (10:03 IST)
Updated Date: Tue, 16 May 2023 (10:23 IST)
ಬೆಂಗಳೂರು : ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದ್ದು, ಇದೀಗ ಸಿಎಂ ಕುರ್ಚಿಗಾಗಿ ಭಾರೀ ಫೈಟ್ ನಡೆಯುತ್ತಿದೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಹೊಟ್ಟೆಯಲ್ಲಿ ಸಮಸ್ಯೆಯಿದೆ. ಗ್ಯಾಸ್ಟಿಕ್ ಪ್ರಾಬ್ಲಂ ಆಗಿದೆ. ವೈದ್ಯರು ಬರುತ್ತಾರೆ, ರೆಸ್ಟ್ ಮಾಡುವುದಾಗಿ ತಿಳಿಸಿದರು. ಈ ಮೂಲಕ ದೆಹಲಿ ಪ್ರವಾಸ ರದ್ದುಗೊಳಿಸುವುದಾಗಿ ಪರೋಕ್ಷವಾಗಿ ಡಿಕೆಶಿ ಹೇಳಿದರು.
ನಾನು ಪೂಜೆ ಪುರಸ್ಕಾರ ಮಾಡಬೇಕಿದೆ. ನನ್ನ ಜೊತೆ ಯಾವ ಶಾಸಕರು ಇಲ್ಲ. ನನಗೆ ಯಾರ ಬೆಂಬಲವೂ ಬೇಡ. ನನ್ನ ಬಂಡೆ ಅಂತಾ ಕರೆದಿದ್ದೀರಾ. ಬಂಡೆಯನ್ನು ಆಕೃತಿಯಾಗಿ ಆದ್ರೂ ಮಾಡಿ ಇಲ್ಲ ವಿಧಾನಸಭೆಗೆ ಚಪ್ಪಡಿಯಾದ್ರೂ ಮಾಡಿಕೊಳ್ಳಿ ಅಂತಾ ಹೇಳಿದ್ದೆ. ಕಂಬವಾದ್ರೂ ಮಾಡಿ, ಮರಳುಗಂಬವಾದ್ರೂ ಮಾಡಿ. ನನ್ನ ಹತ್ರ ನಂಬರ್ ಇಲ್ಲ. ನಾನು ಪಕ್ಷ ಪೂಜೆ ಮಾಡ್ತೇನೆ. ವ್ಯಕ್ತಿ ಪೂಜೆಯಲ್ಲ ಎಂದರು.