ವಿಟಿಯು ಬಾಕಿ ಉಳಿದಿದ್ದ ಸೆಮಿಸ್ಟರ್ ಪರೀಕ್ಷೆ ನಡೆಸಲು ಮುಂದಾಗಿದೆ. ಪ್ರಥಮ ಸೆಮಿಸ್ಟರ್ UG ಮತ್ತು PG ಪರೀಕ್ಷೆ ಪ್ರಾರಂಭ ದಿನಾಂಕ ಪ್ರಕಟವಾಗಿದ್ದು, ಜು. 26ರಿಂದ ವಿಟಿಯು ಪರೀಕ್ಷೆಗಳು ಆರಂಭವಾಗಲಿದೆ.ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಪ್ರಾಜೆಕ್ಟ್ ಮತ್ತು ಸೆಮಿನಾರ್ ಗಳ ವರದಿ ಕೇವಲ ಸಿಡಿ ಮೂಲಕ ಸಲ್ಲಿಸಬೇಕು.
ಜು.19 ರಿಂದ ಪ್ರಥಮ ಸೆಮಿಸ್ಟರ್ UG ಮತ್ತು PG ವಿದ್ಯಾರ್ಥಿಗಳಿಗೆ ಸ್ಟಡಿ ಹಾಲಿಡೇಸ್ ಕೊಡಲಾಗಿದೆ. ಪ್ರಾಯೋಗಿಕ ಪರೀಕ್ಷೆ ಮುಗಿದ ಕೂಡಲೇ 2ನೇ ಸೆಮಿಸ್ಟರ್ ಆರಂಭವಗಲಿದೆ. ಈ ನಿಯಮ ಅಟೊನಮಸ್ ಕಾಲೇಜುಗಳಿಗೂ ಅನ್ವಯವಾಗಲಿದೆ. ಇನ್ನು ಇದೇ ವಿಷಯವಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಿಂದ ಸುತ್ತೋಲೆ ಪ್ರಕಟವಾಗಿದೆ.