Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಸಂಸದೆ ಸುಮಲತಾ ಅವರನ್ನು ಟ್ರ್ಯಾಪ್ ಮಾಡಲು ಚಿತ್ರೀಕರಿಸಿದ ವೀಡಿಯೋ ಕೂಡ ನಮ್ಮ ಬಳಿ ಇದೆ. ಆ ವೀಡಿಯೋವನ್ನು ತಿರುಚಿ ಅಶ್ಲೀಲ ಸಿಡಿ ಮಾಡಲು ಯತ್ನಿಸಿರುವುದು ನನಗೆ ತಿಳಿದಿದೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಸಂಸ್ಥೆಯನ್ನು ಸುಮಲತಾ ಹಿಂದೆ ಛೂಬಿಟ್ಟು ಅವರನ್ನು ಸಿಲುಕಿಸಲು ಟ್ರ್ಯಾಪ್ ಮಾಡಿದ್ದು ನಮಗೆ ಗೊತ್ತಿದೆ. ಹೋಟೆಲ್ ಗೆ ಹೋಗುತ್ತಿರುವಾಗ ಮಾಡಿದ ವೀಡಿಯೋ ನಮ್ಮ ಬಳಿ ಕೂಡ ಇದೆ ಎಂದರು.
ಸುಮಲತಾ ಮಂಡ್ಯದ ಸೊಸೆ. ಮಗ ಅಭಿ ಜ್ಯೂನಿಯರ್ ರೆಬೆಲ್. ಅವರ ಜೊತೆ ಯಾರೂ ಇಲ್ಲ ಅಂತ ಬಾಯಿಗೆ ಬಂದಂತೆ ಮಾತನಾಡ್ತಿರಾ? ಅವರ ಹಾಗೂ ಅಂಬರೀಶ್ ಬಗ್ಗೆ ಬಾಯಿಗೆ ನಾಲಿಗೆ ಹರಿಯಬಿಡಬೇಡಿ ಎಂದು ಅವರು ಎಚ್ಚರಿಸಿದರು.
ಅಂಬರೀಶ್ ಬಗ್ಗೆ ಮಾತನಾಡಲು ಅವರ್ಯಾರು? ಚಿತ್ರರಂಗದ ಬಗ್ಗೆ ಕೆಟ್ಟದಾಗಿ ಮಾತನಾಡ್ತಿರಾ? ನಿಮ್ಮ ಮನೆಯಲ್ಲೂ ಚಿತ್ರರಂಗದಲ್ಲಿ ಇದ್ದಾರೆ. ನೀವು ಸಿಂಎ ಆಗಿದ್ದಾಗ ಚಿತ್ರರಂಗಕ್ಕೆ ಏನು ಮಾಡಿದ್ದೀರಿ ಎಂಬುದು ಗೊತ್ತಿದೆ. ನಿಮ್ಮ ಬಳಿ ಯಾರೂ ಕೇಳಿಲ್ಲ ಯಾಕೆಂದರೆ ನಿಮ್ಮ ಬುದ್ದಿ ಮೊದಲೇ ಗೊತ್ತಿತ್ತು ಎಂದು ರಾಕ್ ಲೈನ್ ಗುಡುಗಿದರು.