Publish Date: Tue, 16 May 2023 (08:55 IST)
Updated Date: Tue, 16 May 2023 (09:59 IST)
ಇತಿಹಾಸದಲ್ಲಿ ಧೀಮಂತ ನಾಯಕರೂ ಸೋತು, ನಂತರ ಪುಟಿದೆದ್ದಿದ್ದಾರೆ. ನಿಮ್ಮ ಪ್ರೀತಿ, ವಿಶ್ವಾಸ ಇರುವವರೆಗೂ ತಾವು ಎದೆಗುಂದದೆ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಲಾಗುವುದು.
ಮುಂದಿನ ದಿನಗಳಲ್ಲಿ ಗೆಲ್ಲುವ ವಾತಾವರಣ ನಿರ್ಮಾಣ ಮಾಡೋಣ, ಗೆಲುವು ಶಾಶ್ವತ ಅಲ್ಲ, ಸೋಲು ಅಂತಿಮವಲ್ಲ. ನಮ್ಮ ಸೇವಾ ಮನೋಭಾವ ಮುಂದುವರಿಯಲಿದೆ. ನನ್ನ ಹೃದಯ, ಮನಸ್ಸು, ಆಲೋಚನೆ ಚಿಕ್ಕಬಳ್ಳಾಪುರ ಜನತೆಯ ಅಭಿವೃದ್ಧಿಗೆ ಮೀಸಲಾಗಿದೆ.
ಗೆಲುವು, ಸೋಲು ಅಡ್ಡಿ ಆತಂಕವಲ್ಲ, ಅಳಿಲು ಸೇವೆ ಜನರಿಗಾಗಿ ಮುಂದುವರಿಯಲಿದೆ, ಅವರ ಎಲ್ಲ ಕಷ್ಟಗಳಿಗೆ ಅವರ ಮನೆ ಸದಸ್ಯನಾಗಿ ನಿಲ್ಲುತ್ತೇನೆ, ಮುಂದಿನ ಚುನಾವಣೆಗಳಲ್ಲಿ ಸಂಘಟನೆ ಮಾಡಿ, ಗೆಲ್ಲುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.