Publish Date: Wed, 27 Jan 2021 (15:52 IST)
Updated Date: Wed, 27 Jan 2021 (16:06 IST)
ರಾಯಚೂರು : ಪ್ರಯಾಣಿಕಳ ಮೇಲೆ ಟಂಟಂ ವಾಹನ ಚಾಲಕ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಹಿಳೆ ಟಂಟಂನಲ್ಲಿ ಮಗುವಿನ ಜತೆ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ವಾಹನ ನಿಲ್ಲಿಸಿ ಮಗು ಎತ್ತಿಕೊಂಡು ಚಾಲಕ ಓಡಿದ. ತನ್ನ ಮಗುವನ್ನು ರಕ್ಷಿಸಲು ಮಹಿಳೆ ಆತನ ಹಿಂದೆ ಓಡಿದ್ದಾಳೆ. ಈ ವೇಳೆ ಅತ್ಯಾಚಾರ ನಡೆಸಲು ಯತ್ನಿಸಿದ್ದಾನೆ. ರಸ್ತೆಯಲ್ಲಿ ತೆರಳುತ್ತಿದ್ದ ಜನರು ಮಹಿಳೆಯ ರಕ್ಷಣೆ ಮಾಡಿದ್ದಾರೆ. ಆರೋಪಿ ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.