Publish Date: Fri, 15 Jan 2021 (08:42 IST)
Updated Date: Fri, 15 Jan 2021 (08:44 IST)
ಹಿಸಾರ್ : ಹರಿಯಾಣದ ಹಿಸಾರ್ ನಲ್ಲಿ ಆಟೋರಿಕ್ಷಾ ಚಾಲಕನೊಬ್ಬ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಮಾನಭಂಗಕ್ಕೆ ಯತ್ನಿಸಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
ವಿದ್ಯಾರ್ಥಿನಿ ಕಾಲೇಜಿಗೆ ತೆರಳಲು ಆಟೋ ಹತ್ತಿದ ವೇಳೆ ಆಟೋ ಡ್ರೈವರ್ ಮತ್ತು ಆಟೋದಲ್ಲಿದ್ದ ಆತನ ಸಂಬಂಧಿ ಲೈಂಗಿಕ ಕಿರುಕುಳ ನೀಡಿ ಆಕೆಯನ್ನು ಅಪಹರಿಸಲು ಯತ್ನಿಸಿದ್ದಾರೆ. ಆ ವೇಳೆ ಪೊಲೀಸ್ ಗಸ್ತು ತಂಡ ಅದನ್ನು ಗಮನಿಸಿ ಆಟೋ ಹಿಂದೆ ಹೋಗಿ ವಿದ್ಯಾರ್ಥಿನಯನ್ನು ರಕ್ಷಿಸಿ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.