Publish Date: Thu, 14 Jan 2021 (11:11 IST)
Updated Date: Thu, 14 Jan 2021 (11:15 IST)
ರಾಯಚೂರು : ಒಬ್ಬ ಭ್ರಷ್ಟ, 420ಗೆ ಸಚಿವ ಸ್ಥಾನ ನೀಡಿದ್ದಾರೆ. ಸಿಎಂ ಯಡಿಯೂರಪ್ಪ ಕೊಟ್ಟು ಮಾತು ತಪ್ಪಿದ್ದಾರೆ ಎಂದು ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ.
ದಲಿತ ಸಮುದಾಯದ ನಾಗೇಶ್ ರಿಂದ ರಾಜೀನಾಮೆ ಪಡೆದಿದ್ದಾರೆ. ಹಿಂದುಳಿದ ವರ್ಗದ ಶಾಸಕ ಮುನಿರತ್ನರನ್ನು ಕಡೆಗಣಿಸಿದ್ದಾರೆ. ನಾಗೇಶ್, ಮುನಿರತ್ನ ರನ್ನು ಕಡೆಗಣಿಸಿ ಭ್ರಷ್ಟನಿಗೆ ಮಣೆ ಹಾಕಲಾಗಿದೆ. ಸಿಎಂಗೆ ಕೃತಜ್ಞತಾ ಮನೋಭಾವ ಇಲ್ಲವೆಂದು ಹೆಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಮೇಶ್ ಜಾರಕಿಹೊಳಿ ಏಕೆ ಬೆಂಬಲಿಸಿದ್ದಾರೋ ಗೊತ್ತಿಲ್ಲ. ಭ್ರಷ್ಟನನ್ನು ಪಕ್ಷದಲ್ಲಿಟ್ಟುಕೊಂಡು ಸಿಎಂ ಹೇಗೆ ಆಡಳಿತ ಮಾಡ್ತಾರೆ. ಭ್ರಷ್ಟನನ್ನು ಯಾಕೆ ನಿಮ್ಮ ಪಕ್ಷದಲ್ಲಿ ಕೂರಿಸಿಕೊಳ್ಳುತ್ತೀರಿ. ಹುಣಸೂರಿನಲ್ಲಿ ಬಿಜೆಪಿ ಸೋಲಿಸಲು ಹಣ ಲಪಟಾಯಿಸಿ ಕಾಣೆಯಾಗಿದ್ದ ವ್ಯಕ್ತಿಯನ್ನು ಸಚಿವರನ್ನಾಗಿ ಯಾಕೆ ಮಾಡ್ತೀರಿ? ಎಂದು ಅವರು ಸಿಎಂನ್ನು ಪ್ರಶ್ನಿಸಿದ್ದಾರೆ.