Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಪರಸ್ಪರ ಪ್ರೀತಿಸಿ ಮನೆಯವರ ವಿರೋಧ ಕಟ್ಟಿಕೊಂಡು ಆ ಪ್ರೇಮಿಗಳು ಓಡಾಡುತ್ತಿದ್ದವರು. ಈಗ ಸತಿಪತಿಗಳಾಗಿದ್ದಾರೆ. ಯಾರು ಇವರ ಮದುವೆ ಮಾಡಿಸಿದ್ರು…? ಮುಂದೆ ಓದಿ.
ಪ್ರೀತಿಸಿ ಮನೆಯವರ ವಿರೋಧದ ನಡುವೆ ಓಡಾಡುತ್ತಿದ್ದ ಪ್ರೇಮಿಗಳನ್ನು ಕರೆತಂದು ಅತ್ಯಂತ ಸರಳವಾಗಿ ಮದುವೆ ಮಾಡಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ಬೆಳಗಾವಿಯ ಪ್ರವೀಣ ಮತ್ತು ಮಹಾರಾಷ್ಟ್ರದ ಕೊಲ್ಲಾಪುರದ ಸವಿತಾ ಮಧ್ಯೆ ಪ್ರೇಮ ಅಂಕುರಿಸಿತ್ತು. ಮನೆಯವರೂ ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು.
ಧಾರವಾಡದ ದಲಿತ ಸಂಘಟನೆಗಳ ಕಾರ್ಯಕರ್ತರು ಅಂಬೇಡ್ಕರ ಪ್ರತಿಮೆ ಮುಂದೆ ಪ್ರೇಮಿಗಳ ಮದುವೆ ಮಾಡಿಸಿದ್ದು ವಿಷೇಷವಾಗಿತ್ತು.