ವಿಧಾನ ಸಭೆ ಸಚಿವಾಲಯದಲ್ಲಿ ಸಚಿವಾಲಯದ ಸಿಬ್ಬಂದಿಗಳನ್ನು ಅಕ್ರಮವಾಗಿ ನೇಮಿಸಿರುವ ವಿಚಾರದಲ್ಲಿ ಮಾಜಿ ಸ್ಪೀಕರ್ ಕೋಳಿವಾಡ ಮತ್ತು ಅಂದಿನ ವಿಧಾನ ಸಭಾ ಕಾರ್ಯದರ್ಶಿ ಎಸ್. ಮೂರ್ತಿ ಹಾಗೂ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಸ್ವತಂತ್ರ ತನಿಖೆ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.
ನ್ಯಾಯಮೂರ್ತಿ ಸಂತೋಷ ಹೆಗಡೆ ಹಾಗೂ ನ್ಯಾಯ ಮೂರ್ತಿ ವಿಕ್ರಮಜೀತ್ ಸೆನ್ ರವರನ್ನು ತನಿಖೆಗೆ ನೇಮಿಸಬೇಕು. ಈ ಬಗ್ಗೆ ಇಂದಿನ ಸ್ಪೀಕರ್ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಹಾವೇರಿ ಪ್ರವಾಸಿ ಮಂದಿರದಲ್ಲಿ ಎಸ್. ಆರ್. ಹಿರೇಮಠ ಹೇಳಿಕೆ ನೀಡಿದ್ದಾರೆ. ಈ ಪತ್ರಕ್ಕೆ ಕಾನೂನು ಸಲಹೆ ಪಡೆದು ವಿಚಾರಣೆ ಮಾಡಲಾಗುವದು ಅಂತಾ ಸ್ಪೀಕರ್ ಉತ್ತರ ನೀಡಿದ್ದಾರೆ ಇದನ್ನು ಸ್ವಾಗತ ಮಾಡುತ್ತೇವೆ. ಎಸ್. ಮೂರ್ತಿ ವಿಧಾನ ಸೌಧದಲ್ಲಿ ಹುಟ್ಟಿದ ಹಬ್ಬವನ್ನು ಆಚರಣೆ ಮಾಡುತ್ತಾರೆ. ಇವರಿಗೆ ಅಧಿಕಾರ ಕೊಟ್ಟವರು ಯಾರು ? ಎಂದು ಪ್ರಶ್ನಿಸಿದರು. ಈ ಬಗ್ಗೆ ಕೇಂದ್ರ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಮಾಜ ಪರಿವರ್ತನಾ ಸಮಿತಿ ಮುಖಂಡ ಎಸ್. ಆರ್. ಹಿರೇಮಠ ಆಗ್ರಹಿಸಿದ್ದಾರೆ.