ವಿ.ಸೋಮಣ್ಣ ಪವರ್ ಫುಲ್ ಲೀಡರ್

Webdunia
ಶುಕ್ರವಾರ, 13 ಅಕ್ಟೋಬರ್ 2023 (19:20 IST)
ಮಾಜಿ ಸಚಿವ ವಿ. ಸೋಮಣ್ಣ ಅವರಿಗೆ ಪಕ್ಷದಲ್ಲಿ ಅಸಮಾಧಾನ ಇರುವುದು ಸತ್ಯ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ಕೇಂದ್ರದ ಯೋಜನೆ ಬೇರೆಯದೇ ಇತ್ತು. ವಿ. ಸೋಮಣ್ಣ ಪವರ್ ಫುಲ್ ಲೀಡರ್. ಸಿದ್ದರಾಮಯ್ಯ ಅವರನ್ನ ಸೋಲಿಸುವ ಶಕ್ತಿ ಇತ್ತು. ಆದರೆ, ಸಿದ್ದರಾಮಯ್ಯ ಹೇಗೆ ಗೆದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಕೇಂದ್ರದ ನಾಯಕರು ಸೋಮಣ್ಣರನ್ನ ಕೈಬಿಡಲ್ಲ. ಕಾಲೆಳೆದವರ‌ ಪ್ರಯತ್ನ ನಡೆದಿರುತ್ತದೆ. ಆದರೆ, ಸೋಮಣ್ಣ ಕಾಳೆಲೆಯಲು ಸಾಧ್ಯವೇ ಇಲ್ಲ ಎಂದು ಹೇಳಿದರು. ಪಕ್ಷದಲ್ಲಿ ಒಂದು ಕೋಟಿ ಮಂದಿ ಸದಸ್ಯರಿದ್ದಾರೆ. ಯಾರಿಗೆ, ಯಾವ ಸ್ಥಾನ ನೀಡಬೇಕು ಅದನ್ನ ಪಕ್ಷ ತೀರ್ಮಾನ ಮಾಡುತ್ತದೆ. ಪಕ್ಷದ ಋಣ ತೀರಿಸಲು ಪಕ್ಷ ತೀರ್ಮಾನಿಸುತ್ತದೆ. ಅಧ್ಯಕ್ಷನಿಂದಲೇ ಪಕ್ಷ ಬೆಳೆಯುತ್ತದೆ ಎಂಬುದು ತಪ್ಪು ಕಲ್ಪನೆ. ನಿತಿನ್ ಗಡ್ಕರಿಯಿಂದಲೇ ಪಕ್ಷ ಬೆಳೆದಿಲ್ಲ. ಈಶ್ವರಪ್ಪ ಅವರಿಂದಲೂ ಪಕ್ಷ ಬೆಳೆದಿಲ್ಲ. ಏಕ ವ್ಯಕ್ತಿಯಿಂದ ಪಕ್ಷ ಬೆಳೆಯುತ್ತದೆ ಎಂಬುದು ಭ್ರಮೆ ಎಂದರು. ರಾಜ್ಯದಲ್ಲಿ ರಾಜ್ಯಾಧ್ಯಕ್ಷ ಹುದ್ದೆ ಖಾಲಿ ಇಲ್ಲ. ರಾಜ್ಯಾಧ್ಯಕ್ಷ ಯಾರಿಗೆ, ಯಾವಾಗ ಮಾಡಬೇಕು ಎಂಬುದನ್ನ ಪಕ್ಷ ತೀರ್ಮಾನಿಸುತ್ತದೆ ಎಂದು ಅವರು ತಿಳಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಿಂಪ್ರಿ ಚಿಂಚ್ವಡ್ನಲ್ಲಿ ಆಘಾತಕಾರಿ ಘಟನೆ: ಬಟ್ಟೆ ಅಂಗಡಿಯಲ್ಲಿ ಪ್ರೇಯಸಿಗೆ ಯದ್ವಾ ತದ್ವಾ ಹೊಡೆದ ಪ್ರಿಯಕರ Video

ಎಲ್ಲಾ ಇಲ್ಲಿಗೇ ನಿಂತಿಲ್ಲ... ರಾಜೀನಾಮೆ ಬೆನ್ನಲ್ಲೇ ಸಿದ್ದರಾಮಯ್ಯ ಹೇಳಿಕೆ ಗಮನಿಸಲೇಬೇಕು

ತಮ್ಮ ವಿದಾಯ ಭಾಷಣದಲ್ಲಿ ಮಹತ್ವದ ವಿಚಾರ ಹಂಚಿಕೊಂಡ ಸಿದ್ದರಾಮಯ್ಯ

ಬೆಂಗಳೂರು ಸ್ಟಾರ್ಟ್‌ಅಪ್ ನಿಯೋ ಸ್ಯಾನ್ ನಿಂದ ಸೇಫ್‌ಡಿಸ್ಪೋಸ್ ಬೆಂಗಳೂರು ಯೋಜನೆಗೆ ಚಾಲನೆ

ಕರ್ನಾಟಕ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅಧಿಕೃತವಾಗಿ ರಾಜೀನಾಮೆ

ಮುಂದಿನ ಸುದ್ದಿ
Show comments