ಖಾಸಗಿ ಸಾರಿಗೆ ಒಕ್ಕೂಟಗಳಿಂದ ತೇಜಸ್ವಿ ಸೂರ್ಯ ಕಚೇರಿಗೆ ಮುತ್ತಿಗೆಹಾಕಲಾಗಿದೆ.ಬೆಂಗಳೂರು ಜಯನಗರ ಬಳಿ ಇರುವ ತೇಜಸ್ವಿ ಸೂರ್ಯ ಕಚೇರಿಗೆ ಮುತ್ತಿಗೆ ಹಾಕಿದ್ದು,ಕಾರ್ ಪೂಲಿಂಗ್ ಪರ ತೇಜಸ್ವಿ ಸೂರ್ಯ ನಿಂತಿದ್ರು.ಕಾರ್ಪೋರೇಟ್ ಕಂಪನಿಗಳ ಬೆನ್ನಿಗೆ ನಿಂತ ತೇಜಸ್ವಿ ಸೂರ್ಯ ವಿರುದ್ಧ ಖಾಸಗಿ ಸಾರಿಗೆ ಮಾಲೀಕರು ಆಕ್ರೋಶ ಹೊರಹಾಕಿದ್ದಾರೆ.
ಕಾರ್ ಪೂಲಿಂಗ್ ಅವಕಾಶ ನೀಡಿ ಅಂತ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಸಂಸದ ತೇಜಸ್ವಿ ಸೂರ್ಯ ಬರೆದಿದ್ದ.
ತೇಜಸ್ವಿ ಸೂರ್ಯ ನಿರ್ಧಾರಕ್ಕೆ ಕೆರಳಿ ಬೆಂಗಳೂರಿನ ಕಚೇರಿಗೆ ಖಾಸಗಿ ಸಾರಿಗೆ ಒಕ್ಕೂಟ ಮುತ್ತಿಗೆ ಹಾಕಿದೆ.ಖಾಸಗಿ ಸಾರಿಗೆ ಒಕ್ಕೂಟದ ಆಧ್ಯಕ್ಷ ನಟರಾಜ್ ಶರ್ಮ ನೇತೃತ್ವದಲ್ಲಿ ಮುತ್ತಿಗೆ ಹಾಕಲಾಗಿದೆ.ನಿನ್ನೆ ಸಂಜೆಯವರಿಗೆ ತೇಜಸ್ವಿ ಸೂರ್ಯ ಗೆ ಡೆಡ್ ಲೈನ್ ಖಾಸಗಿ ಸಾರಿಗೆ ಒಕ್ಕೂಟ ಗಳುನೀಡಿದೆ.ಆದ್ರೆ ನಿರ್ಧಾರ ವಾಪಸು ಪಡೆಯದ ತೇಜಸ್ವಿ ಸೂರ್ಯಗೆ ಇಂದು ಮುತ್ತಿಗೆ ಹಾಕಿ ಸಾರಿಗೆ ಒಕ್ಕೂಟ ಬಿಸಿ ಮುಟ್ಟಿಸಿದೆ.ಸಂಸದ ತೇಜಸ್ವಿ ಸೂರ್ಯ ಕಚೇರಿ ಬಳಿ ಬಿಗುವಿನ ವಾತಾವರಣ ಮೂಡಿದೆ.ಮುತ್ತಿಗೆ ಹಾಕಲು ಬಂದ ಪ್ರತಿಭಟನಾ ಕರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.