Select Your Language

Notifications

webdunia
webdunia
webdunia
webdunia

ಘಟಾನುಘಟಿ ಸ್ಟಾರ್ ಗಳ ಜೊತೆ ತೆಲುಗು ಸಿನಿಮಾದಲ್ಲಿ ನಟಿಸಲಿದ್ದಾರೆ ಶಿವಣ್ಣ

ಘಟಾನುಘಟಿ ಸ್ಟಾರ್ ಗಳ ಜೊತೆ ತೆಲುಗು ಸಿನಿಮಾದಲ್ಲಿ ನಟಿಸಲಿದ್ದಾರೆ ಶಿವಣ್ಣ
ಬೆಂಗಳೂರು , ಶುಕ್ರವಾರ, 13 ಅಕ್ಟೋಬರ್ 2023 (16:16 IST)
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಇತ್ತೀಚೆಗೆ ತಮಿಳಿನ ಜೈಲರ್ ಸಿನಿಮಾದಲ್ಲಿ ಅಭಿನಯಿಸಿ ಎಲ್ಲರ ಗಮನ ಸೆಳೆದಿದ್ದರು. ಅತಿಥಿ ಪಾತ್ರವಾದರೂ ಪರಭಾಷಿಕರು ಶಿವಣ್ಣ ಸ್ಟೈಲ್, ಖದರ್ ಗೆ ಫಿದಾ ಆಗಿದ್ದರು.

ಇದೀಗ ಶಿವರಾಜ್ ಕುಮಾರ್ ಮತ್ತೊಂದು ಪರಭಾಷಾ ಸಿನಿಮಾ ಒಪ್ಪಿಕೊಂಡಿದ್ದಾರೆ. ತೆಲುಗಿನ ವಿಷ್ಣು ಮಂಚು ಅಭಿನಯಿಸುತ್ತಿರುವ ‘ಕಣ್ಣಪ್ಪ’ ಎನ್ನುವ ಸಿನಿಮಾದಲ್ಲಿ ಶಿವಣ್ಣ ಕೂಡಾ ನಟಿಸಲಿದ್ದಾರೆ.

ವಿಶೇಷವೆಂದರೆ ಈ ಸಿನಿಮಾದಲ್ಲಿ ಪ್ರಭಾಸ್, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟಿಸುತ್ತಿದ್ದಾರೆ. ಅವರ ಜೊತೆ ಈಗ ಶಿವಣ್ಣ ಕೂಡಾ ಸೇರ್ಪಡೆಯಾಗಿದ್ದಾರೆ.ಮಲ್ಟಿ ಸ್ಟಾರ್ ಸಿನಿಮಾವಾಗಿರುವುದರಿಂದ ಚಿತ್ರದ ಮೇಲೆ ಭಾರೀ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಬ್ಜ ಸಿನಿಮಾ ತಂಡದ ಬಗ್ಗೆ ಶಿವಣ್ಣ ಅಸಮಾಧಾನ ಹೊರಹಾಕಿದ್ದೇಕೆ?