Publish Date: Thu, 08 Sep 2022 (14:19 IST)
Updated Date: Thu, 08 Sep 2022 (15:24 IST)
ಕಾಡು ಪ್ರಾಣಿಗಳನ್ನು ಸಾಕುವುದು ಕಾನೂನು ಉಲ್ಲಂಘನೆ ಮತ್ತು ಶಿಕ್ಷಾರ್ಹ ಅಪರಾಧ ವಾಗಿದ್ದು ,
ಮೂರು ತಿಂಗಳ ಎರಡು ಹುಲಿ ಮರಿಗಳು ಮಾರಾಟಕ್ಕಿವೆ. ಶೀಘ್ರವೇ ಸಂಪರ್ಕಿಸಿ ಎಂದು ವಾಟ್ಸ್ಆಯಪ್ ಸ್ಟೇಟಸ್ ಇಟ್ಟಿದ್ದ ವ್ಯಕ್ತಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಮೂರು ತಿಂಗಳ ಹುಲಿ ಮರಿ ಮಾರಾಟಕ್ಕಿವೆ. ಬುಕಿಂಗ್ ಮಾಡಿದ 10 ದಿನಗಳಲ್ಲಿ ವಿತರಣೆ ಮಾಡಲಾಗುವುದು. ಈ ಹುಲಿ ಮರಿಗಳ ಬೆಲೆ 25 ಲಕ್ಷ ರೂಪಾಯಿಗಳು. ಬೇಕಾದವರು ಶೀಘ್ರವೇ ಸಂಪರ್ಕಿಸಿ ಎಂದು ಬಂಧಿತ ಆರೋಪಿ ತನ್ನ ವಾಟ್ಸ್ಆಯಪ್ ಸ್ಟೇಟಸ್ ಹಾಕಿಕೊಂಡಿದ್ದ.
ತಿರುಪತಿಯಲ್ಲಿ ಕಾನೂನು ವ್ಯಾಸಂಗ ಮಾಡಿರುವ ಆತ, ಚೆನ್ನೈನ ಅಂಬತ್ತೂರಿನಲ್ಲಿ ಪೆಟ್ಶಾಪ್ ಹೊಂದಿರುವ ಸ್ನೇಹಿತನ ಕೋರಿಕೆಯ ಮೇರೆಗೆ ಹುಲಿ ಮರಿಗಳ ಮಾರಾಟದ ಬಗ್ಗೆ ವಾಟ್ಸ್ಆಯಪ್ ಸ್ಟೇಟಸ್ ಹಾಕಿದ್ದೇನೆ ಎಂದು ತಿಳಿಸಿದ್ದಾನೆ.