ಹುಬ್ಬಳ್ಳಿಯ ಗ್ರಾ.ಪಂ ಸದಸ್ಯ ದೀಪಕ್ ಪಠದಾರಿ ಹತ್ಯೆ ಪ್ರಕರಣದ ತನಿಖೆಯನ್ನು ಹಳ್ಳ ಹಿಡಿಸಲು ಪ್ರಭಾವಿಗಳು ಯತ್ನಿಸಿದ್ದಾರೆ. ಕೊಲೆ ಪ್ರಕರಣದ ಪ್ರಮುಖ ಸಾಕ್ಷಿ ಹಾಗೂ ಸಹೋದರ ಸಂಜಯ್ ಪಠದಾರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗ್ತಿದೆ. ಅರಣ್ಯ ಇಲಾಖೆಯ ಸರ್ಕಾರಿ ಅಧಿಕಾರಿಯಿಂದ ಇಬ್ಬರ ಮೇಲೆ ಬೆದರಿಕೆ ಹಾಕಲಾಗಿದೆ. ಸರ್ಕಾರಿ ನೌಕರರಾದ ಹುಬ್ಬಳ್ಳಿಯ ಪ್ರಕಾಶ್ ಕರಗುಪ್ಪಿಯಿಂದ ಬೆದರಿಕೆ ಕರೆ ಬಂದಿದೆ ಎಂದು ಸಂಜಯ್ ಆರೋಪ ಮಾಡ್ತಿದ್ದಾರೆ. ನಾಗರಾಜ ಹೆಗ್ಗಣ್ಣವರ ಮೇಲೆ ದೂರು ದಾಖಲಿಸದಂತೆ ಹೇಳಿ, ಕೇಸ್ ದಾಖಲಿಸಿದ್ರೆ ಜೀವಕ್ಕೆ ಹಾನಿ ಮಾಡುವ ಬೆದರಿಕೆ ಹಾಕಲಾಗಿದೆ ಅಂತೆ. ಪ್ರಕಾಶ್ ಕರಗುಪ್ಪಿ ಮೇಲೆ CID ಅಧಿಕಾರಿಗಳ ಸೂಚನೆ ಮೇರೆಗೆ ದೂರು ದಾಖಲು ಮಾಡಲಾಗಿದೆ. ಸದ್ಯ ಪಠದಾರಿ ಹತ್ಯೆ ಪ್ರಕರಣವನ್ನು CID ತಂಡ ತನಿಖೆ ನಡೆಸುತ್ತಿದ್ದು, ಬೆಂಗಳೂರಿನಿಂದ ಬಂದ ವಿಶೇಷ ತಂಡದಿಂದ ತನಿಖೆ ಚುರುಕುಗೊಂಡಿದೆ.