Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತಿಮ್ಮಪ್ಪನ ಆಸ್ತಿ 2 ಲಕ್ಷ ಕೋಟಿ ರೂಪಾಯಿ

ತಿಮ್ಮಪ್ಪನ ಆಸ್ತಿ 2 ಲಕ್ಷ ಕೋಟಿ ರೂಪಾಯಿ
ತಿರುಪತಿ , ಸೋಮವಾರ, 26 ಸೆಪ್ಟಂಬರ್ 2022 (20:35 IST)
ವಿಶ್ವದ ಅತಿ ಸಿರಿವಂತ ಹಿಂದೂ ದೇವಾಲಯ ಎಂಬ ಖ್ಯಾತಿಯ ತಿರುಪತಿ ತಿಮ್ಮಪ್ಪನ ಖಜಾನೆ ಭರ್ಜರಿಯಾಗಿ ತುಂಬಿದೆ. ಕೊರೋನಾ ಕಾಲದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಿಸಿದ್ದ ತಿಮ್ಮಪ್ಪನ ಬಳಿ ಭೂಮಿ, ಒಡವೆ ಇತ್ಯಾದಿ ರೂಪದಲ್ಲಿ ಸಾವಿರಾರು ಕೋಟಿ ರೂ. ಸಂಪತ್ತು ಸಂಗ್ರಹಗೊಂಡಿದೆ. ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್‌ ದೇಶಾದ್ಯಂತ ಹೊಂದಿರುವ 960 ಸ್ವತ್ತುಗಳ ಮೌಲ್ಯ 85,705 ಕೋಟಿ ರೂ. ಆಗಿದೆ. ಆದರೆ ಈ ಸ್ವತ್ತುಗಳ ಇಂದಿನ ಮಾರುಕಟ್ಟೆ ಮೌಲ್ಯವು ಒಂದೂವರೆ ಪಟ್ಟು ಹೆಚ್ಚಿದ್ದು, ಸುಮಾರು 2 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇಷ್ಟೊಂದು ಸಂಪತ್ತು ಹೊಂದಿದ ದೇಗುಲ ಜಗತ್ತಿನಲ್ಲೇ ಬೇರೆಲ್ಲೂ ಇಲ್ಲ. ನಿತ್ಯವೂ ತಿಮ್ಮಪ್ಪನಿಗೆ ಕಾಣಿಕೆ ರೂಪದಲ್ಲಿ ಭಕ್ತರು ನಗದು, ಒಡವೆಗಳನ್ನು ನೀಡುವುದು ಸಾಮಾನ್ಯ. ಹಬ್ಬ ಹರಿದಿನಗಳಲ್ಲಿ ಹಾಗೂ ನವರಾತ್ರಿ ಹಿನ್ನೆಲೆಯಲ್ಲಿ ತಿಮ್ಮಪ್ಪನ ದೇಣಿಗೆ ಪ್ರಮಾಣ ಹೆಚ್ಚುತ್ತದೆ. ಸರ್ಕಾರದ ಸೂಚನೆಯಂತೆ ಕಳೆದ ವರ್ಷದಿಂದ TTDಯು ತಾನು ಹೊಂದಿರುವ ಆಸ್ತಿ ಬಗ್ಗೆ ಶ್ವೇತ ಪತ್ರ ಪ್ರಕಟಿಸುತ್ತಿದೆ. ಈ ವರ್ಷ ಆಸ್ತಿಯ ಮೌಲ್ಯವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು Y.V.ಸುಬ್ಬಾರೆಡ್ಡಿ ವಿವರ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಕೊರೋನಾ ಇಳಿಮುಖ