Publish Date: Tue, 22 Aug 2023 (15:41 IST)
Updated Date: Tue, 22 Aug 2023 (15:30 IST)
ಇಬ್ಬರು ಕೃಷಿ ಅಧಿಕಾರಿಗಳ ವಿಚಾರಣೆಗೆ ಸಂಬಂಧಪಟ್ಟಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಹಾಗೆ ಆರೋಪ ಮಾಡುವುದರಲ್ಲಿ ಅರ್ಥ ಇಲ್ಲ. ಕೇವಲ ಪತ್ರ ನಕಲಿ ಎಂಬುದು ಗೊತ್ತಾಗಿದೆ. ಅದು ಹೇಗೆ ಭ್ರಷ್ಟಾಚಾರ ಎಂಬುದು ಸಾಬೀತಾಗುತ್ತದೆ? ಇನ್ನಷ್ಟು ತನಿಖೆ ಮಾಡ್ತೇವೆ. ಪತ್ರ ಯಾಕೆ ಬರೆದರು ಯಾರು ಬರೆಸಿದರು ಗೊತ್ತಾಗಲಿದೆ. ಪತ್ರ ಯಾರಾದರೂ ಬರೆಸಿದರಾ ಅನ್ನೋದು ಗೊತ್ತಾಗಲಿದೆ. ಅವರೇ ಖುದ್ದಾಗಿ ಬರೆದರಾ ಅಥವಾ ಹಿಂದೆ ಯಾರಾದರೂ ಇದ್ದಾರಾ ಅನ್ನೋದು ಗೊತ್ತಾಗಲಿದೆ ಎಂದರು.